ಉಡುಪಿ: ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಹಾಗೂ ಬಿಲ್ಲವರ ಸೇವಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಅ.30ರಂದು ಸಂಜೆ 5ಗಂಟೆಗೆ ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ಪ್ರೇರಣಾ ಭಾಷಣ ಮಾಲಿಕೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದಿರುವ ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಇವರು ‘ವಿಜಯಕ್ಕೆ ಐದು ಮೆಟ್ಟಲು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರಮನೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಸ್ವತಃ ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನಕ್ಕೆ ತುತ್ತಾಗಿ ಅದರಿಂದ ಹೊರಬರಲು ರೂಬಿಕ್ ಕ್ಯೂಬ್‌ನಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಗ್ರ್ಯಾಂಡ್‌ಮಾಸ್ಟರ್ ಮುಂಬಯಿಯ ಅಫಾನ್ ಕುಟ್ಟಿ ಅವರು ‘ರೂಬಿಕ್ ಕ್ಯೂಬ್‌ನಿಂದ ಇಂಟರ್ನಟ್ ವ್ಯಸನ ಮುಕ್ತಿ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಯಂಡಮೂರಿ ಹಾಗೂ ಅಫಾನ್ ಕುಟ್ಟಿ ಅವರು ಅ.29ರಂದು ಸಂಜೆ 5ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಡಾ.ವಿರೂಪಾಕ್ಷ ದೇವರುಮನೆ ಅವರ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡುವರು ಎಂದೂ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಸೌಜನ್ಯ ಶೆಟ್ಟಿ, ಡಾ.ನಾಗರಾಜ ಮೂರ್ತಿ ಹಾಗೂ ಕಸಾಪ ತಾಲೂಕು ಘಟಕದ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು