ಉಡುಪಿ: ಫೆ.19-21 ರ ವರೆಗೆ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ನಡೆಯಲಿರುವ ಶ್ರೀಮನ್ನಾಗಮಂಡಲದ ಹಿನ್ನೆಲೆಯಲ್ಲಿ ಗೋದಾಮಕ್ಕೆ ಕಾರ್ಕಳ ಶಾಸಕ, ಮಾಜಿ ಸಚಿವರಾದ ವಿ.ಸುನಿಲ್ ಕುಮಾರ್ ಭೇಟಿ ನೀಡಿದರು. ನಾಗಮಂಡಲದ ಹಿನ್ನೆಲೆಯಲ್ಲಿ ಗೋಧಾಮದಲ್ಲಿ ನಡೆಯುತ್ತಿರುವ ಪೂರ್ವತಯಾರಿ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭ ಕಡ್ತಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುಕೇಶ್ ಹೆಗ್ಡೆ ಕಡ್ತಲ, ನಾಗಮಂಡಲ ಸಮಿತಿಯ ಕಾರ್ಯದರ್ಶಿ ದಾಮೋಧರ ಶರ್ಮ, ಜ್ಯೋತಿ ಹರೀಶ್, ಗೋಧಾಮದ ರಕ್ಷಿತ್ ಆಚಾರ್ಯ, ಪ್ರಕಾಶ್ ಶೆಟ್ಟಿ, ಸುಹಾಸ್ ಶೆಟ್ಟಿ, ಆಶಿತ್, ದಯಾನಂದ್ ಕೆ. ಮತ್ತಿತರರು ಉಪಸ್ಥಿತರಿದ್ದರು.

