Friday, February 6, 2026

ಕೇಂದ್ರ ಬಜೆಟ್-2026: ಯಾವುದೆಲ್ಲ ಇಳಿಕೆ? ಯಾವುದೆಲ್ಲ ಏರಿಕೆ?.. ಇಲ್ಲಿದೆ ಮಾಹಿತಿ!

Must read

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಸಿಕ್ಕಿದ್ದೇನು, ಯಾವುದೆಲ್ಲ ಇಳಿಕೆ ಮತ್ತು ಏರಿಕೆ ಎನ್ನುವ ಮಾಹಿತಿ ಇಲ್ಲಿದೆ.
ಯಾವುದಕ್ಕೆಲ್ಲ ಇಳಿಕೆ:
ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷೆ ಸೇರಿ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಸಮುದ್ರ ಆಹಾರ, ಮೈಕ್ರೋಅವನ್, ಮೇಕ್ ಇನ್ ಇಂಡಿಯಾ ಅಡಿ ತಯಾರಾಗುವ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್, ಖೇಲೊ ಇಂಡಿಯಾ ಅಡಿ ಕ್ರೀಡಾ ಸಾಮಗ್ರಿಗಳ ಬೆಲೆ ಇಳಿಕೆಯಾಗಿದೆ. ಬೀಡಿ, ಬ್ಯಾಟರಿಗಳ ಮೇಲಿನ ಬೆಲೆ ಇಳಿಕೆ, ಸೋಲಾರ್ ಬಿಡಿಭಾಗ, ಪ್ಯಾನಲ್ ಬೆಲೆ ಇಳಿಕೆ. 17 ಕ್ಯಾನ್ಸರ್ ಔಷಧಗಳ ಮೇಲಿನ ಬೆಲೆ ಇಳಿಕೆ. ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಸುಂಕ ವಿಧಿಸಬಹುದಾದ ಎಲ್ಲಾ ಸರಕುಗಳ ಮೇಲಿನ ಸುಂಕ ದರವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸಲಾಗಿದೆ. 7 ಅಪರೂಪದ ಕಾಯಿಲೆಗಳ ಔಷಧಗಳ ಮೇಲಿನ ಬೆಲೆ ಇಳಿಕೆಯಾಗಿದೆ. ಬಟ್ಟೆ, ವಿದೇಶಿ ಪ್ರಯಾಣ, ವಿದೇಶದಲ್ಲಿ‌ ಓದು, ಜೈವಿಕ ಅನಿಲ ಮಿಶ್ರಿತ ಸಿಎನ್‌ಜಿ ಇಳಿಕೆಯಾಗಿದೆ.

ಯಾವುದಕ್ಕೆಲ್ಲ ಏರಿಕೆ:

ಸಿಗರೇಟ್, ಪಾನ್ ಮಸಾಲಾ ಏರಿಕೆ, ಆಮದಾಗುವ ಮದ್ಯಗಳ ಏರಿಕೆ, ಲಕ್ಷುರಿ ವಾಚ್ ಮೇಲಿನ ಸುಂಕ ಹೆಚ್ಚಳ, ಖನಿಜಗಳು, ಕಬ್ಬಿಣದ ಅದಿರು, ಕಲ್ಲಿದ್ದಲು, ವಿಡಿಯೊ ಗೇಮ್ಸ್ ಮತ್ತು ಸಾಫ್ಟ್‌ವೇರ್, ಛತ್ರಿಗಳು ಹಾಗೂ ಡಿಜಿಟಲ್ ಕ್ಯಾಮೆರಾ ಬೆಲೆ ಏರಿಕೆಯಾಗಿದೆ.

spot_img

More articles

LEAVE A REPLY

Please enter your comment!
Please enter your name here