ಉಡುಪಿ: ಯೂತ್ ಫ್ರೆಂಡ್ಸ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ (ರಿ.) ಪಿತ್ರೋಡಿ ಇವರ ಆಶ್ರಯದಲ್ಲಿ ಉದ್ಯಾವರದ ಬೋಳಾರಗುಡ್ಡೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ “ಶ್ರೀರಾಮ್ ಟ್ರೋಫಿ- 2026” ಅಂತರ್ ರಾಜ್ಯಮಟ್ಟದ ಆಹ್ವಾನಿತ ಮಹಿಳಾ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಶ್ರೀದುರ್ಗಾ ಫ್ರೆಂಡ್ಸ್ ಕಾರ್ಕಳ ತಂಡವು ಪ್ರಥಮ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ನವ್ಯ ಸ್ಪೈಕರ್ಸ್ ತಂಡ ದ್ವಿತೀಯ, ಆದ್ಯಾ ಸ್ಪೈಕರ್ಸ್ ತಂಡ ತೃತೀಯ ಹಾಗೂ ಸಿದ್ದಿ ವಿನಾಯಕ ಫ್ರೆಂಡ್ಸ್ ಕಟ್ಟೆಗುಡ್ಡೆ ತಂಡವು ಚತುರ್ಥ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಶ್ರೀದುರ್ಗಾ ಫ್ರೆಂಡ್ಸ್ ಕಾರ್ಕಳ ತಂಡದ ಪ್ರಿಯಾಂಕ ಬೆಸ್ಟ್ ಸೆಟ್ಟರ್, ಸ್ವಾತಿನಿ ಬೆಸ್ಟ್ ಅಟ್ಯಾಕರ್ ಮತ್ತು ಸೌಮಿಲಿ ಬೆಸ್ಟ್ libero ಪ್ರಶಸ್ತಿ ಪಡೆದುಕೊಂಡರು. ನವ್ಯ ಸ್ಪೈಕರ್ಸ್ ತಂಡದ ಶ್ರೀಯಾ ಆಲ್ ಗ್ರೌಂಡರ್ ಪ್ರಶಸ್ತಿ ಹಾಗೂ ಆದ್ಯಾ ಸ್ಪೈಕರ್ಸ್ ತಂಡ ದೀಪ್ತಿ ಅತ್ಯುತ್ತಮ ಕಿರಿಯ ಆಟಗಾರ್ತಿ ಪ್ರಶಸ್ತಿ ತನ್ನದಾಗಿಸಿಕೊಂಡರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಮಾಲತಿ ಸಂದೀಪ್, ಉಪಾಧ್ಯಕ್ಷ ರಾಜೇಶ್ ಕುಂದರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಾವರ ಗ್ರಾಪಂ ಸದಸ್ಯರಾದ ಚೇತನ್ ಕುಮಾರ್ ಪಿತ್ರೋಡಿ, ರೇಖಾ ಶಂಕರ್, ದಯಾನಂದ ಕೋಟ್ಯಾನ್ ಪಿತ್ರೋಡಿ, ತಾಪಂ ಮಾಜಿ ಸದಸ್ಯ ಕಿರಣ್ ಕುಮಾರ್ ಪಿತ್ರೋಡಿ, ಪಬ್ಲಿಕ್ ನೆಸ್ಟ್ ಕ್ಲಸ್ಟರ್ ಹೆಡ್ ಶೃತಿ ಜೈನ್, ಅಂತರಾಷ್ಟ್ರೀಯ ಅಥ್ಲೆಟಿಕ್ ಶಾಲಿನಿ ಶೆಟ್ಟಿ, ನಟಿ ಸ್ವಾತಿ ಶೆಟ್ಟಿ, ಯುವ ಉದ್ಯಮಿಗಳಾದ ನಿಶಾಂತ್ ಕರ್ಕಡ ಪಿತ್ರೋಡಿ, ರಿಕೇಶ್ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯೂತ್ ಫ್ರೆಂಡ್ಸ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಪಿತ್ರೋಡಿ ಅಧ್ಯಕ್ಷ ಭರತ್ ಸ್ವಾಗತಿಸಿದರು. ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.
,

