Saturday, March 28, 2026

ಕೊಡೇರಿ ಶ್ರೀ ರಾಮ ಭಜನಮಂದಿರ: ವೈಭವದ ಶ್ರೀ ರಾಮ ತೊಟ್ಟಿಲೋತ್ಸವ ಸಂಪನ್ನ

Must read

ನಾಗೂರು: ಕೊಡೇರಿ ಹಕ್ರೆಮಠ ಶ್ರೀ ರಾಮ ಭಜನ ಮಂದರಿದಲ್ಲಿ ರಾಮ ನವಮಿಯ ಅಂಗವಾಗಿ ವರ್ಷಂಪ್ರತಿ ನಡೆಯುವ ಶ್ರೀ ರಾಮ ತೊಟ್ಟಿಲೋತ್ಸವವು ಶುಕ್ರವಾರ ಮಂದಿರಲ್ಲಿ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ ಉದಯಕಾಲದ ಪೂಜೆಯೊಂದಿಗೆ ಏಕಹ ಭಜನೆ ಆರಂಭಗೊಂಡು, ತೊಟ್ಟಿಲೋತ್ಸವದ ಪ್ರಯುಕ್ತ ಬಾಲರಾಮನ ಮೂರ್ತಿಯನ್ನು ಶಾಸ್ತ್ರೋಕ್ತವಾಗಿ ತೊಟ್ಟಿಲೊಳಗೆ ಇಟ್ಟು ಮಾತೆಯರ ಒಡಗೂಡಿ ತೊಟ್ಟಿಲು ತೂಗುವ ಶಾಸ್ತ್ರ ನಡೆಯಿತು. ಅನಂತರ ತುಲಾಭಾರ ಸೇವೆ, ಅನ್ನಸಂತರ್ಪಣೆ ಜರಗಿತು. ಸಂಜೆ ದೇವರ ಪುರಮೆರವಣಿಗೆ ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ವರೆಗೂ ಸಾಗಿ ಮಂದಿರಕ್ಕೆ ವಾಪಸ್ ಆಗಿದೆ. ಊರ, ಪರವೂರ ಭಕ್ತರು ಅಪರ ಸಂಖ್ಯೆಯಲ್ಲಿ ಸೇರಿದ್ದರು.
ಮಂದಿರದ 107ನೇ ವರ್ಷದ ತ್ರಿಕಾಲ ಭಜನ ಮಂಗಲೋತ್ಸವವು ಶನಿವಾರ ಬೆಳಗ್ಗೆ ಸಂಪನ್ನಗೊಳ್ಳಲಿದೆ.

spot_img

More articles

LEAVE A REPLY

Please enter your comment!
Please enter your name here