Tuesday, March 31, 2026

ಶಿರಿಯಾರ ಸಹಕಾರಿ ಸಂಘದ ಹಣ ದುರುಪಯೋಗ ಪ್ರಕರಣ: ಎರಡನೇ ಆರೋಪಿ ಪತ್ತೆಯಿಲ್ಲ

Must read

ಉಡುಪಿ: ಸಾಯಿಬ್ರಕಟ್ಟೆಯ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆ ಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿ ಹಲವು ದಿನ ಕಳೆದರೂ ಎರಡನೇ ಆರೋಪಿಯ ಬಂಧನ ಆಗಿಲ್ಲ.


ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಆಗಿದ್ದ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ 1 ಕೋಟಿ 70 ಲಕ್ಷ ರೂ ಅಧಿಕ ಹಣ ದುರುಪಯೋಗಪಡಿಸಿಕೊಂಡಿದ್ದರು ಹಾಗೂ ಹರೀಶನಿಗೆ ಸಂಬಂಧಿಸಿದ ಚಿನ್ನಾಭರಣವನ್ನು ಅದೇ ಶಾಖೆಯಲ್ಲಿ ಅಡವಿಟ್ಟು 21 ಲಕ್ಷ ರೂ. ಪಡೆದು ವಂಚಿಸಿರುವುದಾಗಿ ಸಹಕಾರಿಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಮುಖ ಆರೋಪಿ ಸುರೇಶ ನನ್ನು ನ.19ರಂದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು.

ಸುರೇಶನ ಬಂಧನವಾಗಿ ಒಂದೇ ದಿನದಲ್ಲಿ ನ್ಯಾಯಾಲಯದಿಂದ ಜಾಮೀನು ದೊರೆತಿದ್ದರಿಂದ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ ಹಾಗೂ ಹಣ ದುರುಪಯೋಗ ಹೇಗೆ ನಡೆದಿದೆ. ದುರುಪಯೋಗ ಪಡಿಸಿಕೊಂಡ ಹಣ ಏನಾಗಿದೆ ಹಾಗೂ ಆದ ಯಾರೆಲ್ಲ ಭಾಗೀದಾರರು ಎಂಬೆಲ್ಲ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಎರಡನೇ ಆರೋಪಿಯ ಮೂಲಕ ಈ ಎಲ್ಲ ಮಾಹಿತಿಗಳು ಹೊರಬರಬೇಕಿದೆ. ಬಂಧನ ವಿಳಂಬವಾಗುತ್ತಿರುವುದರಿಂದ ಎರಡನೇ ಆರೋಪಿಗೂ ಜಾಮೀನು ದೊರೆತಲ್ಲಿ ಪ್ರಕರಣದ ಕುರಿತು ಸ್ಪಷ್ಟಮಾಹಿತಿ ನಿಗೂಢವಾಗಲಿದ್ದು ಕೋಟ್ಯಂತರ ರೂಪಾಯಿ ಹಣ ದುರುಪಯೋಗದ ಪ್ರಕರಣದ ಸತ್ಯಾ ಸತ್ಯತೆ ಹಳ್ಳಹಿಡಿಯಲಿದೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿದೆ.

spot_img

More articles

LEAVE A REPLY

Please enter your comment!
Please enter your name here