Tuesday, March 17, 2026

ಮೋದಿ ರೋಡ್ ಶೋದಲ್ಲಿ ಭಾಗವಹಿಸುವವರು ಈ ಸೂಚನೆಗಳನ್ನು ಪಾಲಿಸುವುದು ಕಡ್ಡಾಯ!

Must read

ಉಡುಪಿ: ಶುಕ್ರವಾರ (ನ.28) ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಬರುವವರು ಬೆಳಿಗ್ಗೆ 10.30ರೊಳಗೆ ಆಗಮಿಸಿ ನಿಗದಿತ ಸ್ಥಳ ಸೇರುಬೇಕು. ತಡವಾಗಿ ಬಂದವರನ್ನು ನಿರ್ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.
ರೋಡ್‌ ಶೋ ಮಾರ್ಗದ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಪೊಲೀಸ್ ಬ್ಯಾರಿಕೇಡ್ ದಾಟಬಾರದು. ರೋಡ್ ಶೋ ಮಾರ್ಗದಲ್ಲಿ ನೀರಿನ ಬಾಟಲ್, ಬ್ಯಾಗ್‌ಗಳು, ಹೂವಿನ ಬೊಕ್ಕೆ, ನೆನಪಿನ ಕಾಣಿಕೆ, ಕ್ಯಾಮರಾ, ಬಾಕ್ಸ್‌ಗಳನ್ನು, ಯಾವುದೇ ಹರಿತವಾದ ಆಯುಧಗಳು, ಚಾಕು, ಬೆಂಕಿ ಸಾಮಗ್ರಿಗಳು, ಡೋನ್‌ಗಳು, ಸ್ಪೋಟಕ ವಸ್ತುಗಳು, ಲೇಸರ್ ಲೈಟ್, ಧ್ವಜದ ಕಂಬಗಳು ಇತ್ಯಾದಿ ನಿಷೇಧಿಸಲಾಗಿದೆ. ಎಲ್ಲಾ ಸಾರ್ವಜನಿಕರು ಕಡ್ಡಾಯವಾಗಿ ಪೊಲೀಸ್ ಪರಿಶೀಲನೆಗೆ ಒಳಗಾಗಬೇಕು. ರೋಡ್ ಶೋ ಮಾರ್ಗದ ಯಾವುದೇ ಕಟ್ಟಡಗಳ ಮೇಲೆ ಹತ್ತಬಾರದು. ಹಿರಿಯ ನಾಗರೀಕರು, ಮಕ್ಕಳು ಮತ್ತು ಮಹಿಳೆಯರಿಗೆ ಆದ್ಯತೆ ನೀಡಿ ಸಹಕರಿಸಬೇಕು. ವರ್ಷದ ಕೆಳಗಿನ ಮಕ್ಕಳನ್ನು ಕರೆತರಬಾರದು. ಯಾವುದೇ ಸಂಶಯಾಸ್ಪದ ವ್ಯಕ್ತಿ ಅಥವಾ ವಸ್ತು ಕಂಡಲ್ಲಿ ತಕ್ಷಣ ಹತ್ತಿರದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಹೆಚ್ಚುವರಿಯಾಗಿ ಯಾವುದೇ ಧ್ವಜ, ಚಿತ್ರಪಟ ತರಕೂಡದು. ಸಾರ್ವಜನಿಕರು ಯಾವುದೇ ಉದ್ವೇಗಕ್ಕೆ ಒಳಗಾಗಿ ನೂಕುನುಗ್ಗಲು ಮಾಡುವಂತಿಲ್ಲ. ಎಲ್ಲಾ ಸಂಧರ್ಭಗಳಲ್ಲಿ ಪೊಲೀಸರೊಂದಿಗೆ ತಾಳ್ಮೆಯಿಂದ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ

spot_img

More articles

LEAVE A REPLY

Please enter your comment!
Please enter your name here