ಉಡುಪಿ: ಮಣಿಪಾಲದ ಸೆಮಿಕಂಡಕ್ಟರ್ ತಂತ್ರಜ್ಞಾನ ಸಂಸ್ಥೆ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಅಂಗವಾಗಿ ಜನರ ಸುರಕ್ಷತೆ, ಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮಣಿಪಾಲದ ರಾಜೀವನಗರದಿಂದ ಇಂಡಸ್ಟ್ರಿಯಲ್ ಏರಿಯಾದವರೆಗೆ ಅಳವಡಿಸಲಾದ ಸಾರ್ವಜನಿಕ ರಸ್ತೆ ದೀಪವನ್ನು ಉದ್ಘಾಟಿಸಲಾಯಿತು. ಮಣಿಪಾಲ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರೂಪಾಕ್ಷಯ್ಯ ಕುಲಕರ್ಣಿ, ಮಣಿಪಾಲ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ ಪುತ್ರನ್, ಕಾರ್ಮಿಕ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್ ಮಣಿಪಾಲ್ ಸಿಇಒ ರತ್ನಾಕರ ಭಟ್, ಸಿಎಫ್ ಓ ಗಜಾನನ ಶಾನುಭಾಗ್, ಸಿಒಒ ದಿಲೀಪ್ ಮೊಗವೀರ, ಸಿಟಿಒ ಗುರುರಾಜ್ ಬಂಕಾಪುರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

