Monday, January 12, 2026

ಮಲ್ಪೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ದೇವಾಡಿಗ ಮಾರ್ಪಳ್ಳಿ ಹೃದಯಾಘಾತದಿಂದ ನಿಧನ

Must read

ಉಡುಪಿ: ಮಲ್ಪೆ ನಾರಾಯಣಗುರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ, ಅಲೆವೂರು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಗಣೇಶ್ ದೇವಾಡಿಗ ಮಾರ್ಪಳ್ಳಿ(51) ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಇಂದು ಎಂದಿನಂತೆ ಶಾಲೆಗೆ ಕರ್ತವ್ಯಕ್ಕೆ ತೆರಳಿದ ಗಣೇಶ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಉಡುಪಿಯ ಮಾರ್ಪಳ್ಳಿ ನಿವಾಸಿಯಾಗಿದ್ದ ಇವರು ಸ್ಥಳೀಯ ಗೆಳೆಯರ ಬಳಗ, ಭಜನ ಮಂಡಳಿ ಹಾಗೂ ಗದ್ದಿಗೆ ಅಮ್ಮನವರ ಸಮಿತಿಯಲ್ಲಿ ಸಕ್ರಿಯರಾಗಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

spot_img

More articles

LEAVE A REPLY

Please enter your comment!
Please enter your name here