ಉಡುಪಿ: ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಶ್ರೀ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಕಾರ್ಯಕ್ರಮ ನ.19ರಂದು ನಡೆಯಲಿದೆ. ದೀಪೋತ್ಸವದಲ್ಲಿ ವಡೇರಹೋಬಳಿ, ಹಂಗಳೂರು, ಕೋಣಿ, ಕೋಟೇಶ್ವರ, ಬೀಜಾಡಿ, ಗೋಪಾಡಿ, ಬಸೂರು ಆನಗಳ್ಳಿ, ತಲ್ಲೂರು ಮೊದಲಾದ ಗ್ರಾಮಗಳಿಂದ ಸುಮಾರು 20 ರಿಂದ 25 ಸಾವಿರ ಜನ ಭಕ್ತಾದಿಗಳು ಭಾಗವಹಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಕುಂದಾಪುರ ಠಾಣಾ ವ್ಯಾಪ್ತಿಯ ಕಸಬಾ ಗ್ರಾಮ ವಡೇರಹೋಬಳಿ, ಹಂಗಳೂರು, ಕೋಟೇಶ್ವರ, ಕುಂಭಾಶಿ, ಬೀಜಾಡಿ, ಮೂಡುಗೋಪಾಡಿ, ಕೋಡಿ, ವಕ್ಕಾಡಿ, ಕೋಣಿ, ಆನಗಳ್ಳಿ. ಹೆಮ್ಮಾಡಿ, ತಲ್ಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ನ.19ರಂದು ಬೆಳಿಗ್ಗೆ 6ಗಂಟೆಯಿಂದ ನ.20ರಂದು ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

