ಉಡುಪಿ: ಸಂಪೂರ್ಣ ವಾರ್ತೆ ಚಾನೆಲ್ ವತಿಯಿಂದ ಧಾರವಾಡದ ರಂಗಾಯಣದಲ್ಲಿ ನಡೆದ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಪದವೀಧರೆ ಅನವಿ ಪಿ ಶೆಟ್ಟಿ ಅವರಿಗೆ ಸಂಪೂರ್ಣ ರತ್ನ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸುರಕೊಟ್ಟಿಕೊಪ್ಪ ಸದ್ಗುರುಗಳಾದ ಲಡ್ಡುಮುತ್ಯಾ ಆಶ್ರಮದ ಶ್ರೀ ಲಡ್ಡುಮುತ್ಯಾ ಸ್ವಾಮೀಜಿ, ಹುಬ್ಬಳ್ಳಿಯ ಸಮಾಜ ಸೇವಕರುಗಳಾದ ವೆಂಕಟೇಶ್ ಕಾಟವೇ, ಸಂತೋಷ್ ವೆರ್ಣೇಕರ್, ಈಶ್ವರಗೌಡ ಪಾಟೀಲ,ರಮೇಶ್ ಮಹದೇವಪ್ಪನವರ್, ಅನ್ನಪೂರ್ಣ ಎ ಪಾಟೀಲ, ಭಾವೇಶ್ ರಾಠೋಡ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಪೂರ್ಣ ವಾರ್ತೆ ಚಾನೆಲ್ ನ ವ್ಯವಸ್ಥಾಪಕ ನಿರ್ದೇಶಕ ಶಿವಾನಂದ್ ಬಿ.ವಿ ಕಾರ್ಯಕ್ರಮ ಸಂಯೋಜಿಸಿದರು.
ಅನವಿ ಪಿ ಶೆಟ್ಟಿ ಬ್ರಹ್ಮಾವರದ ಜಿಎಂ ಪಬ್ಲಿಕ್ ಸ್ಕೂಲ್ ನಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಉಡುಪಿ ಸಂತೆಕಟ್ಟೆಯ ಲಕ್ಷ್ಮಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಗಳ ಪುತ್ರಿ.
ಉಡುಪಿಯ ಅನವಿ ಪಿ. ಶೆಟ್ಟಿಗೆ ಸಂಪೂರ್ಣ ರತ್ನ ರಾಜ್ಯ ಪ್ರಶಸ್ತಿ ಪ್ರದಾನ
More articles

