ಉಡುಪಿ: ಕೊಡವೂರು ಸಾಲ್ಮರದ ಮನೆಯಲ್ಲಿ ನಡೆದ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಬಡಗಬೆಟ್ಟು ಮಿಷನ್ ಕಂಪೌಂಡ್ ನಿವಾಸಿ ರಿಧಾ ಶಭಾನಾ (27) ಎಂದು ಗುರುತಿಸಲಾಗಿದೆ.
ಈಕೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಮೊದಲ ಆರೋಪಿ ಫೈಜಲ್ ಖಾನ್ ಪತ್ನಿಯಾಗಿದ್ದಾಳೆ. ಪೊಲೀಸರು ಈಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮಹಮದ್ ಫೈಸಲ್ ಖಾನ್(27), ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮೊಹಮದ್ ಶರೀಫ್(37), ಸುರತ್ಕಲ್ ಕೃಷಾಪುರದ ಏಳನೇ ಬ್ಲಾಕ್ ನಿವಾಸಿ ಅಬ್ದುಲ್ ಶುಕೂರು ಯಾನೆ ಅದ್ದು (43) ಬಂಧಿಸಿದ್ದಾರೆ. ಇದರಲ್ಲಿ ಶರೀಫ್ ಹಾಗೂ ಅದ್ದು ಎಕೆಎಂಎಸ್ ಬಸ್‌ನಲ್ಲಿ ಚಾಲಕರಾಗಿ ದುಡಿಯುತ್ತಿದ್ದರೆ, ಫೈಸಲ್ ಖಾನ್, ಸೈಫ್‌ನ ಆತ್ಮೀಯನಾಗಿದ್ದನು.
ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ; ಮತ್ತೋರ್ವ ಆರೋಪಿ ಮಹಿಳೆಯ ಬಂಧನ
More articles

