Saturday, April 18, 2026

ಉಡುಪಿ: ಆ.29ರಂದು “ಜಿಎಸ್ ಟಿ ಸೊಲ್ಯೂಷನ್ಸ್” ಕಾರ್ಯಕ್ರಮ

Must read

ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿಯ ನೇತೃತ್ವದಲ್ಲಿ ಉಡುಪಿ ಟ್ಯಾಕ್ಸ್ ಬಾರ್ ಅಸೋಸಿಯೇಶನ್, ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ ಉಡುಪಿ ಬ್ರಾಂಚ್ (ಎಸ್ ಐ ರ್ ಸಿ),ಉಡುಪಿ ಜಿಲ್ಲಾ ಬೇಕರಿ ಹಾಗೂ ಖಾದ್ಯ ತಿನಸುಗಳ ತಯಾರಕರು ಮತ್ತು ಮಾರಾಟಗಾರರ ಸಂಘ, ಉಡುಪಿ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್, ಉಡುಪಿ ಡಿಸ್ಟಿಕ್ಟ್ ಕನ್ವೆನ್ಷನ್ ಹಾಲ್ ಅಸೋಸಿಯೇಶನ್, ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ಸ್, ಉಡುಪಿ, ಉಡುಪಿ ಹೋಟೆಲ್ ಓನರ್ಸ್ ಅಸೋಸಿಯೇಶನ್ , ಉಡುಪಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಇದೇ ಆ.29ರಂದು ಮಧ್ಯಾಹ್ನ 3ಗಂಟೆಯಿಂದ 6 ಗಂಟೆಯವರಗೆ ಉಡುಪಿ ಕಿದಿಯೂರು ಹೋಟೆಲ್ ನ ಅನಂತ ಶಯನ ಹಾಲ್ ನಲ್ಲಿ “ಜಿಎಸ್ ಟಿ ಸೊಲ್ಯೂಷನ್ಸ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಗೌರವ ಕಾರ್ಯದರ್ಶಿ ಡಾ. ವಿಜಯೇಂದ್ರ ವಸಂತ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆಗೆ ಸಂಬಂಧ ಪಟ್ಟ ನೇರ ಪ್ರಶೆಗಳನ್ನು ಇಲಾಖೆ ಯ ಅಧಿಕಾರಿಗಳಿಗೆ ಕೇಳಿ ಉತ್ತರ ಪಡೆಯುವ ಹಾಗೂ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಪರಿಹಾರವಾಗಬಲ್ಲ ವಿಚಾರಗಳ ಮನವಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವ ಅವಕಾಶ ಇದೆ. ಈ ಕಾರ್ಯಕ್ರಮದಲ್ಲಿ ತಜ್ಞರ ಸಮಿತಿಯಲ್ಲಿ ಶ್ರೀ ಹೊಳೆಯಪ್ಪ ಡೆಪ್ಯುಟಿ ಕಮಿಷನರ್, ಉಡುಪಿ, ಹೇಮಲತ ಡೆಪ್ಯುಟಿ ಕಮಿಷನರ್ ಮಂಗಳೂರು, ಡಿಪಾರ್ಟಮೆಂಟ್ ಆಫ್ ಕಮರ್ಷಿಯಲ್ ಟ್ಯಾಕ್ಸ್, ಉಡುಪಿ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ನ ಅಧ್ಯಕ್ಷರಾದ ಬಿ ಎಂ ಭಟ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ನ ಮಾಜಿ ಕಾರ್ಯದರ್ಶಿ ಹಾಗೂ ಖ್ಯಾತ ಆಡಿಟರ್ ಆದ CA ಸುರೇಂದ್ರ ನಾಯಕ್, ಖ್ಯಾತ ಟ್ಯಾಕ್ಸ್ ಕನ್ಸಲ್ಟೆಂಟ್ ಶ್ರೀ ಪ್ರಸಾದ್ ಉಪಾಧ್ಯಾಯ, ಖ್ಯಾತ ಆಡಿಟರ್ ಆದ CA ಗಣೇಶ್ ವೈ ,ಸಭಾಪತಿ ಗಳಾಗಿ ಶ್ರೀ ಕುಮಾರ ವಿ Jt ಕಮಿಷನರ್, ಶ್ರೀ ಲಕ್ಷಾಪತಿ ನಾಯ್ಕ್, Jt ಕಮಿಷನರ್, ಡಿಪಾರ್ಟಮೆಂಟ್ ಆಫ್ ಕಮರ್ಷಿಯಲ್ ಟ್ಯಾಕ್ಸ್, ಮಂಗಳೂರು ವಿಭಾಗ ಹಾಗೂ ಶ್ರೀ ಅಮ್ಮುಂಜೆ ಪ್ರಭಾಕರ್ ನಾಯಕ್, ಅಧ್ಯಕ್ಷರು ಉಡುಪಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಇವರು, ಜೊತೆಗೆ ಎಲ್ಲಾ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಆಸಕ್ತ ವಾಣಿಜ್ಯ ಸಂಸ್ಥೆಗಳ ಮಾಲಕರು ಮತ್ತು ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು, ಸದಸ್ಯರು ಭಾಗವಹಿಸುತ್ತಾರೆ ಎಂದು ತಿಳಿಸಿದರು.

spot_img

More articles

LEAVE A REPLY

Please enter your comment!
Please enter your name here