Sunday, March 15, 2026

ಕುಂದಾಪುರ: ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಕೆಎಸ್ಆರ್ ಟಿ ಬಸ್: 36 ಮಂದಿಗೆ ಗಾಯ, ಓರ್ವ ಮಹಿಳೆ ಗಂಭೀರ

Must read

ಉಡುಪಿ: ಕೆ.ಎಸ್.ಆರ್.ಟಿ. ಬಸ್ ರಸ್ತೆ ಪಕ್ಕದ ಟೋಲ್ ಗೇಟ್ ನ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದ ಪರಿಣಾಮ 12 ಮಂದಿ ಗಾಯಗೊಂಡ ಘಟನೆ ಸಾಸ್ತಾನ ಟೋಲ್ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದೆ.
ಬೆಳಿಗ್ಗೆ ಸುಮಾರು 4.30 ರ ಸುಮಾರಿಗೆ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಟೋಲ್ ನಿಂದ 500 ಮೀಟರ್ ಹಿಂದಿದ್ದ ಸೂಚನಾ ಫಲಕಕ್ಕೆ ಢಿಕ್ಕಿಯಾಗಿದೆ. ಇಳಕಲ್ ನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್ಆರ್ ಟಿ ಬಸ್ಸಿನಲ್ಲಿ 36 ಮಂದಿ ಪ್ರಯಾಣಿಕರಿದ್ದು, ಅಪಘಾತದ ರಭಸಕ್ಕೆ 12 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ. ಉಳಿದ ಪ್ರಯಾಣಿಕರು ಹಾಗೂ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡವರನ್ನು ತತ್ ಕ್ಷಣ ಕೋಟ ಜೀವನ್ ಮಿತ್ರ ಹಾಗೂ ಟೋಲ್ ಆಂಬುಲೆನ್ಸ್ ನಲ್ಲಿ ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here