Sunday, January 11, 2026

ಉಡುಪಿ: ಆ.21ರಿಂದ 30ರವರೆಗೆ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ

Must read

ಉಡುಪಿ: ಭರತನಾಟ್ಯದಲ್ಲಿ ವಿದುಷಿ ಪದವಿಯನ್ನು ಪಡೆದ ದೀಕ್ಷಾ ವಿ. ಅವರು 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ವಿಶ್ವದಾಖಲೆ ಬರೆಯಲು ಸಜ್ಜಾಗಿದ್ದಾರೆ. ಇದೇ ಆ.21ರಿಂದ 30ರವರೆಗೆ ಉಡುಪಿ ಅಜ್ಜರಕಾಡಿನ ಡಾ. ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಮತ್ತು‌ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ವಿಶ್ವದಾಖಲೆಯ ಪ್ರದರ್ಶನ ನೀಡಲಿದ್ದಾರೆ.
ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದುಷಿ ದೀಕ್ಷಾ ವಿ ಅವರು, ಮಣಿಪಾಲದ ರತ್ನ ಸಂಜೀವ ಕಲಾಮಂಡಲದ ವತಿಯಿಂದ “ನವರಸ ದೀಕ್ಷಾ ವೈಭವಂ” ಎಂಬ ಶೀರ್ಪಿಕೆಯೊಂದಿಗೆ ಈ ವಿಶ್ವದಾಖಲೆಯ ಕಾರ್ಯಕ್ರಮ ನಡೆಯಲಿದೆ. ನಾನು ವಿದ್ವಾನ್ ಶ್ರೀಧರ ರಾವ್ ಶಿಷ್ಯೆೆ. ಭರತನಾಟ್ಯದಲ್ಲಿ ಆಸಕ್ತಿ ಹೊಂದಿದ್ದು, ಈ ಕಲೆಯಲ್ಲಿ ವಿಶೇಷ ಸಾಧನೆ ಮಾಡುವ ಉದ್ದೇಶ ಹೊಂದಿದ್ದೇನೆ.
ಸುದ್ದಿಗೋಷ್ಠಿಯಲ್ಲಿ ವಿದ್ವಾನ್ ಶ್ರೀಧರ ರಾವ್, ಉಷಾ ಹೆಬ್ಬಾರ್, ಅಶ್ವಿನಿ ಮಹೇಶ್ ಠಾಕೂರ್ ಇದ್ದರು.

spot_img

More articles

LEAVE A REPLY

Please enter your comment!
Please enter your name here