Sunday, January 11, 2026

ಉಡುಪಿ ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್ಮಿಷನ್ ಆಸ್ಪತ್ರೆ: ರಕ್ತದಾನ ಶಿಬಿರ

Must read

ಉಡುಪಿ: ಸಿ.ಎಸ್.ಐ ಲೋಂಬಾರ್ಡ್ ಮೆಮೋರಿಯಲ್(ಮಿಷನ್ ಆಸ್ಪತ್ರೆ) ಆಸ್ಪತ್ರೆ ವತಿಯಿಂದ ಮಲ್ಟಿ ಪರ್ಪಸ್ ಹಾಲ್, ಸ್ಕೂಲ್ ಆಫ್ ನರ್ಸಿಂಗ್ ಕ್ಯಾಂಪಸ್‌ನಲ್ಲಿ ಇಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಈ ಶಿಬಿರದಲ್ಲಿ 75ಕ್ಕೂ ಹೆಚ್ಚು ಉತ್ಸಾಹಿ ದಾನಿಗಳು ಭಾಗವಹಿಸಿದ್ದು ಇದು ಮಾನವೀಯತೆ ಮತ್ತು ಸಹಾಯದ ಸ್ಫೂರ್ತಿಗೆ ಸಾಕ್ಷಿಯಾಗಿದೆ. ಸಂಗ್ರಹಿಸಲಾದ ಪ್ರತಿಯೊಂದು ರಕ್ತದ ಯೂನಿಟ್ ಕೂಡ ಅಪಘಾತದ ಬಲಿಗಳಿಗೆ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಹಾಗೂ ಪ್ರಾಣಾಪಾಯದ ಕಾಯಿಲೆಗಳಿಗೆ ತುತ್ತಾದವರಿಗೆ ಸಹಾಯವಾಗಲಿದೆ.
ಕಾರ್ಯಕ್ರಮವನ್ನು ರೆ.ರಚೇಲ್ ಡಿ’ಸಿಲ್ವ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಡಗಬೆಟ್ಟು ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರು, ಆಸ್ಪತ್ರೆಯು ಸಾರ್ವಜನಿಕರ ಕಲ್ಯಾಣಕ್ಕಾಗಿ ಹಲವಾರು ಶಿಬಿರಗಳನ್ನು ಆಯೋಜಿಸುತ್ತಿದ್ದು, ಆಸ್ಪತ್ರೆಯ ಇತ್ತೀಚಿನ ಬೆಳವಣಿಗೆಗಳು ಶ್ಲಾಘನೀಯವಾಗಿದೆ’ ಎಂದು ಹೇಳಿದರು.
ಕುಂದಾಪುರದ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಅಧ್ಯಕ್ಷ ಜಯಕರ ಶೆಟ್ಟಿ ಮಾತನಾಡಿ, ರಕ್ತದಾನ ಎನ್ನುವುದು ಬದುಕು ನೀಡುವ ದಾನವಾಗಿದೆ. ಪ್ರತಿಯೊಬ್ಬ ದಾನಿಗೂ ನಾವು ಹತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಸಂತೋಷ್ ಕುಮಾರ್, ಅಧ್ಯಕ್ಷರು- ಲಯನ್ಸ್ ಕ್ಲಬ್ ಚೇತನ ಉಡುಪಿ,ಅರುಣ್ ಕುಮಾರ್ ಶೆಟ್ಟಿ, ಅಧ್ಯಕ್ಷರು-ಕಲಾಕಿರಣ ಕ್ಲಬ್ ಬೈಲೂರ್ ಉಡುಪಿ, ಡಾ. ತಿಲಕ್ ಚಂದ್ರಪಾಲ್, ಅಧ್ಯಕ್ಷರು – ಉಡುಪಿ ರನ್ನರ್ಸ್ ಕ್ಲಬ್, ಶೇಖ್ ಫಯಾಜ್, ಅಧ್ಯಕ್ಷರು ಬ್ಲಡ್ ಹೆಲ್ಸ್ ಕೇರ್, ಕರ್ನಾಟಕ, ದೀನಾ ಪ್ರಭಾವತಿ, ಆಡಳಿತಾಧಿಕಾರಿ, ಎ.ಒ., ಲೋಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ, ಚಾಪ್ಲಿನ್ ರವ ರಚೀಲ್ ಡಿಸಿಲ್ವಾ – ಈ ಎಲ್ಲ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯು ಸಂಪೂರ್ಣ ಶಿಬಿರವನ್ನು ಸುರಕ್ಷಿತ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ನಡೆಸಿದರು. ರಕ್ತದಾನಿಗಳಿಗು ಧನ್ಯತೆಯ ಪ್ರಮಾಣಪತ್ರ ಹಾಗೂ ಉಡುಗೊರೆ ನೀಡಲಾಯಿತು. ಪಿ.ಆರ್.ಓ ರೋಹಿ ರತ್ನಾಕರ್ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ.ನಾರಾಯಣ ಪೆರಲಾಯ ವಂದಿಸಿದರು.

spot_img

More articles

LEAVE A REPLY

Please enter your comment!
Please enter your name here