Wednesday, March 25, 2026

ಉಡುಪಿ: ಉಚಿತ ಸೆಟ್ ಟಾಪ್ ಬಾಕ್ಸ್ ಹೆಸರಿನಲ್ಲಿ‌ ವಂಚನೆ: ಗ್ರಾಹಕರೇ ಎಚ್ಚರ!

Must read

ಉಡುಪಿ: ಇತ್ತೀಚೆಗೆ ಕೇಬಲ್ ಅಪರೇಟರ್ ಗಳು 2 ವರ್ಷಕೊಮ್ಮೆ ತಮ್ಮ ಸೆಟ್ ಆಫ್ ಬಾಕ್ಸ್ ಗಳನ್ನು ಬದಲಾವಣೆ ಮಾಡುತ್ತಿದ್ದು, ಇದರಿಂದ ಗ್ರಾಹಕರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಕೆಲವೊಂದು ಕೇಬಲ್ ಅಪರೇಟರ್ ಮುಖ್ಯಸ್ಥರು ಸ್ವಂತ ಲಾಭಕ್ಕಾಗಿ ಇತರ ಕೇಬಲ್ ಅಪರೇಟರ್ ಗಳ ಮೂಲಕ ಹೊಸ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಒತ್ತಾಯಿಸುತ್ತಿರುವ ಬಗ್ಗೆಯೂ ದೂರು ಕೇಳಿಬಂದಿದೆ.
ಅಲ್ಲದೆ, ಹೊಸ ಹೊಸ ಕಂಪೆನಿಗಳು ಕೇಬಲ್ ಉದ್ಯಮಕ್ಕೆ ಕಾಲಿಟ್ಟಿದ್ದು, ಇವರು ಗ್ರಾಹಕರಿಗೆ ಹೊಸ ಪ್ಲ್ಯಾನ್ ಗಳನ್ನು ನೀಡಿದರೆ ಅದನ್ನು ಗ್ರಾಹಕರಿಗೆ ಅಪರೇಟರ್ ಗಳು ನೀಡದೆ ವಂಚಿಸುತ್ತಿದ್ದಾರೆ. ಇದೀಗ ಉಡುಪಿಗೆ ಕಾಲಿಟ್ಟಿರುವ ಗುಜರಾತ್ ಮೂಲದ ಸಂಸ್ಥೆ ಗ್ರಾಹಕರಿಗೆ ಉಚಿತ ಸೆಟ್ ಟಾಪ್ ಬಾಕ್ಸ್ ಜೊತೆಗೆ ಮೂರು ತಿಂಗಳ ಮಾಸಿಕ ದರವನ್ನು ಉಚಿತವಾಗಿ ನೀಡುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಆದರೆ ಇದ್ಯಾವುದೇ ಸೌಲಭ್ಯ ಗ್ರಾಹಕರಿಗೆ ನೀಡದೆ ಅಪರೇಟರ್ ಗಳು ವಂಚಿಸುತ್ತಿದ್ದಾರೆ. ಪದೇ ಪದೇ ಬದಲಾಯಿಸುವ ಪ್ರಕ್ರಿಯೆಯಿಂದ ಹಿರಿಯ ನಾಗರಿಕರು ಮತ್ತು ಗ್ರಾಮಾಂತರ ಪ್ರದೇಶದ ಜನರಿಗೆ ಬಹಳ ಸಮಸ್ಯೆಯಾಗಿದೆ. ಚಾನೆಲ್ ಗಳ ನಂಬರ್ ನಲ್ಲಿಯೂ ವ್ಯತ್ಯಾಸ ಆಗಿದ್ದು ಮತ್ತು ಚಾನೆಲ್ ಗಳ ಪ್ರಸಾರದಲ್ಲಿಯೂ ಹಿಂದಿಗಿಂತಲೂ ಕಳಪೆ ಆಗಿದೆ. ಹೆಚ್ಚಿನ ಭಾಗದಲ್ಲಿ ಗ್ರಾಹಕರು ತಿರಸ್ಕರಿಸಿದರೂ ಒತ್ತಾಯ ಪೂರ್ವಕವಾಗಿ ಅಳವಡಿಸಿದ ಬಗ್ಗೆ ದೂರುಗಳು ಬರುತ್ತಿವೆ. ಗ್ರಾಹಕರು ತಮಗೆ ನೀಡಲಾದ ಮೂರು ತಿಂಗಳ ಉಚಿತ ಮಾಸಿಕ ದರದ ಸೌಲಭ್ಯ ನೀಡುವ ಬೇಡಿಕೆ ಕೇಳಿದಾಗ ಗ್ರಾಹಕರೊಂದಿಗೆ ಹಲವು ಅಪರೇಟರ್ ಗಳು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದ್ದರಿಂದ ಸಂಬಂಧ ಪಟ್ಟ ಇಲಾಖೆಯವರು ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಹಕರು ಒತ್ತಾಯಿಸುತ್ತಿದ್ದಾರೆ.

spot_img

More articles

LEAVE A REPLY

Please enter your comment!
Please enter your name here