Sunday, January 11, 2026

ಇಂದ್ರಾಳಿ ರೈಲ್ವೆ ಸ್ಟೇಷನ್ ಗೆ ಉಡುಪಿ ರೈಲ್ವೆ ಯಾತ್ರಿ ಸಂಘದ ಭೇಟಿ

Must read

ಉಡುಪಿ: ರೈಲ್ವೆ ಯಾತ್ರಿ ಸಂಘ ಉಡುಪಿ ಇದರ ಅಧ್ಯಕ್ಷರಾದ ಧೀರಜ್ ಶಾಂತಿಯವರ ನೇತೃತ್ವದಲ್ಲಿ ಬುಧವಾರ ಪದಾಧಿಕಾರಿಗಳ ನಿಯೋಗವು ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿತು ಮತ್ತು ಸ್ಟೇಷನ್ ಮಾಸ್ಟರ್ ನಾಗರಾಜ್ ಶೆಟ್ಟಿ ಮತ್ತು ನಿಲ್ದಾಣದ ಸಹಾಯಕ ಉಸ್ತುವಾರಿ ಸತ್ಯನಾರಾಯಣ ಭಟ್ ರವರ ಜೊತೆ ಸಮಾಲೋಚನೆ ನಡೆಸಿ ನಿಲ್ದಾಣದ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಉಪಾಧ್ಯಕ್ಷರಾದ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೋಶಾಧಿಕಾರಿ ಅಜಿತ್ ಕುಮಾರ್ ಶೆಣೈ, ನಿರ್ದೇಶಕರಾದ ಸದಾನಂದ ಅಮೀನ್ ಮತ್ತು ಜಾನ್ ರೆಬೆಲ್ಲೊ ಹಾಜರಿದ್ದರು.

spot_img

More articles

LEAVE A REPLY

Please enter your comment!
Please enter your name here