Sunday, January 11, 2026

ಪತ್ರಕರ್ತರ ವಿರುದ್ಧ ಮಾನಹಾನಿ ಪೋಸ್ಟ್ ಹಾಕಲಾರೆವು ಎಂದು ಕ್ಷಮೆ ಕೇಳಿದ ಪ್ರಖ್ಯಾತ್ ಬಿ.ಜೆ ಹಾಗೂ ಹರಿಪ್ರಸಾದ್ ಶೆಟ್ಟಿ

Must read

ಕಾರ್ಕಳ: ಸಾಮಾಜಿಕ ಜಾಲತಾಣದಲ್ಲಿ ಪ್ರಕ್ಷವೊಂದರ ಪರವಾಗಿ ಪ್ರಚಾರ ಕಾರ್ಯದಲ್ಲಿ ತಲ್ಲೀನರಾದ ಪ್ರಖ್ಯಾತ್ ಬಿ.ಜೆ ಹಾಗೂ ಹರಿಪ್ರಸಾದ್ ಶೆಟ್ಟಿ ಎಂಬವರು ರಾಜಕೀಯ ದಾಳಕ್ಕೆ ಮುಂದಾಗಿ ಪತ್ರಕರ್ತರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು.
ಇವರ ಈ ಕೃತ್ಯವನ್ನು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ತುರ್ತು ಸಭೆಯನ್ನು ಆಯೋಜಿಸಿಸಲಾಗಿತ್ತು. ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದಲ್ಲಿ ಪತ್ರಕರ್ತರು ಕಾರ್ಕಳ ಎ.ಎಸ್.ಪಿ ಡಾ. ಹರ್ಷ ಪ್ರಯಂವದಾ ರವರಿಗೆ ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತ ಎಎಸ್ಪಿ ಅವರು ಆರೋಪಿಗಳ ಪತ್ತೆಗೆ ನಿರ್ದೇಶನ ನೀಡಿದ್ದರು. ಅದರನ್ವಯ ಕಾರ್ಕಳ ಪೊಲೀಸರು ಆರೋಪಿಗಳಾದ ಪ್ರಖ್ಯಾತ್ ಬಿ.ಜೆ ಹಾಗೂ ಹರಿಪ್ರಸಾದ್ ಶೆಟ್ಟಿ ಇವರನ್ನು ಕಚೇರಿಗೆ ಕರೆತಂದಿದ್ದರು.
ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಪತ್ರಕರ್ತರ ಕುರಿತು ಅವಹೇಳನ ಕಾರಿ ಬರಹದ ಕುರಿತು ವಿವರ ನೀಡಿದ ಆರೋಪಿಗಳು ನಾವು ಆ ಸಂದರ್ಭದಲ್ಲಿ ಮಾಡಿರುವ ಕಮೆಂಟ್‌ನಲ್ಲಿ ಅಪಾರ್ಥವಾಗಿರುವ ವಿಷಯ ನಮಗೆ ನಂತರ ತಿಳಿದು ಈ ಬಗ್ಗೆ ಕ್ಷಮೆಯನ್ನು ಕೇಳಿರುತ್ತಾರೆ. ಇನ್ನು ಮುಂದಕ್ಕೆ ಇಂತಹ ಮಾನಹಾನಿಕರ ಪೋಸ್ಟ್ಗಳನ್ನು ಮಾಡುವುದಿಲ್ಲವೆಂದು ತಿಳಿಸಿ ಈ ಬಾರಿ ಮನ್ನಿಸಬೇಕೆಂದು ವಿನಂತಿಸಿಕೊAಡಿರುತ್ತಾರೆ.
ಈ ಬಗ್ಗೆ ಆರೋಪಿಗಳಿಂದ ಹೇಳಿಕೆಯನ್ನು ಪೊಲೀಸರು ಪಡೆದುಕೊಂಡುಕೊಂಡಿದ್ದಾರೆ.
ಮುಂದಕ್ಕೆ ಇಂತಹ ಪೋಸ್ಟ್ಗಳನ್ನು ಮಾಡಿದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಅವರಿಗೆ ಈ ಭಾರಿ ಸೂಕ್ತ ಎಚ್ಚರಿಕೆಯನ್ನು ನೀಡಲಾಗಿದೆ ಎಂಬುವುದಾಗಿ ಎಎಸ್ಪಿ ಡಾ. ಹರ್ಷಾ ಪ್ರಿಯಂವದಾ ಅವರು ಕಾರ್ಕಳ ತಾಲುಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮಾಹಿತಿ ನೀಡಿದ್ದಾರೆ.

spot_img

More articles

LEAVE A REPLY

Please enter your comment!
Please enter your name here