Tuesday, March 17, 2026

ಕೋಡಿ ಸೇತುವೆಯ ಬಳಿ ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆ

Must read

ಉಡುಪಿ: ಕೋಡಿ ಸೇತುವೆಯ ಬಳಿ ಸ್ಕೂಟರ್ ಚಪ್ಪಲಿ ಬಿಟ್ಟು ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾಗಿದ್ದಾರೆ.
ಕುಂದಾಪುರ ವಿಠ್ಠಲವಾಡಿ ನಿವಾಸಿ ಹೀನಾ ಕೌಶರ್(33) ನಾಪತ್ತೆಯಾದ ವಿವಾಹಿತೆ. ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಸೇತುವೆ ಬಳಿ ಚಪ್ಪಲಿ ಸ್ಕೂಟರ್ ಪತ್ತೆಯಾಗಿತ್ತು. ನಾಪತ್ತೆಯಾದ ಮಹಿಳೆಯ ಪತಿ ವಿದೇಶದಲ್ಲಿದ್ದು, ಎರಡು ಮಕ್ಕಳು, ತಾಯಿ ಜೊತೆ ವಾಸವಾಗಿದ್ದರು. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದಾಗ ಆತಂಕಗೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಪೊಲೀಸ್ ರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಸೇತುವೆ ಕೆಳಗಿನ ನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದುವರೆಗೂ ನಾಪತ್ತೆಯಾದ ವಿವಾಹಿತೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ, ಪತ್ತೆಗಾಗಿ ತೀವ್ರ ಶೋಧ ಮುಂದುವರಿದಿದೆ

spot_img

More articles

LEAVE A REPLY

Please enter your comment!
Please enter your name here