Monday, January 12, 2026

ಖಡಕ್ ಹಿರಿಯಡಕ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಶಿರ್ವ ಠಾಣೆಗೆ

Must read

ಉಡುಪಿ: ಹಿರಿಯಡಕ ಠಾಣೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಖಡಕ್ ಪೊಲೀಸ್ ಅಧಿಕಾರಿ ಮಂಜುನಾಥ ಮರಬದ ಅವರನ್ನು ಶಿರ್ವ ಠಾಣೆಗೆ ಪಿಎಸ್ ಐ ಆಗಿ ವರ್ಗಾವಣೆ ಮಾಡಿ, ಪೊಲೀಸ್ ಮಹಾ ನಿರೀಕ್ಷಕರು ಪಶ್ಚಿಮ ವಲಯ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನವರಾದ ಮಂಜುನಾಥ್ ಅವರು, 2020ರ ಬ್ಯಾಚಿನ ಸಬ್ ಇನ್ಸ್ಪೆಕ್ಟರ್. ಉಡುಪಿಯಲ್ಲಿ ಇತ್ತೀಚಿಗೆ ಸಂಚಲನ ಹುಟ್ಟಿಸಿದ ಗರುಡ ಗ್ಯಾಂಗ್ ಪ್ರಕರಣದಲ್ಲಿ, ಗರುಡ ಗ್ಯಾಂಗ್ ಸದಸ್ಯ ಇಸಾಕ್ ಶೂಟೌಟ್ ಪ್ರಕರಣದಲ್ಲಿ ಮತ್ತು ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ ನ ಆರೋಪಿಯ ಹೆಡೆಮುರಿ ಕಟ್ಟಿದ ತಂಡದಲ್ಲಿ ಖಡಕ್ ಅಧಿಕಾರಿಯಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ಎರಡು ವರ್ಷದಿಂದ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪಿಎಸ್ಐ (L&O)ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಶಿರ್ವ ಪೊಲೀಸ್ ಠಾಣೆಗೆ ಪಿಎಸ್ಐ L&O ( law and order) ನಿಯೋಜಿಸಲಾಗಿರುತ್ತದೆ.

spot_img

More articles

LEAVE A REPLY

Please enter your comment!
Please enter your name here