ಉಡುಪಿ: ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಕಂಬಳ ಮನೆ ದಿನೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಪರ್ಯಾಯ ಅರ್ಚಕರು ಸೇರಿದಂತೆ, ಪಾಂಡುರಂಗ ನಾಯ್ಕ್, ಶೇಖರ್ ಸುವರ್ಣ ಗರಡಿಮನೆ, ಲಕ್ಷ್ಮೀನಾರಾಯಣ ರಾವ್, ದಿನೇಶ್ ಶೆಟ್ಟಿ ಕಂಬಳ ಮನೆ, ಉಮೇಶ್ ಎಸ್. ಶೆಟ್ಟಿಗಾರ್, ಶಂಕರ್ ಆಚಾರ್ಯ, ವಿಜಯಲಕ್ಷ್ಮಿ ಎಂ., ಚಂದ್ರಾವತಿ ಅವರು ನೇಮಕಗೊಂಡಿದ್ದಾರೆ.
ದೇವಸ್ಥಾನದ ಆಡಳಿತಾಧಿಕಾರಿಯಾದ ರೇಷ್ಮಾ ಅವರು ಬುಧವಾರ ನೂತನ ಅಧ್ಯಕ್ಷರಾದ ದಿನೇಶ್ ಶೆಟ್ಟಿಯವರಿಗೆ ದೇವಸ್ಥಾನದ ಕೀಲಿಕೈ ನೀಡುವ ಮುಖಾಂತರ ಅಧಿಕಾರ ಹಸ್ತಾಂತರಿಸಿದರು.
ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಕಂಬಳ ಮನೆ ದಿನೇಶ್ ಶೆಟ್ಟಿ ಆಯ್ಕೆ
More articles

