Thursday, January 8, 2026

‘ಜನ ನಾಯಗನ್’ ಮೂಲಕ ತಮಿಳು ಚಿತ್ರರಂಗಕ್ಕೆ ಕೆವಿಎನ್‌

Must read

ಅತ್ತ ಸೂರ್ಯ ಮಕರ ರಾಶಿ ಪ್ರವೇಶ ಮಾಡುತ್ತಿದ್ರೆ, ಇತ್ತ ದಳಪತಿ ವಿಜಯ್ ಅಭಿನಯದ ಕಟ್ಟ ಕಡೆಯ ಸಿನಿಮಾದ ಭರ್ಜರಿ ಶೋ ತೆರೆಕಾಣುತ್ತಿರುತ್ತದೆ… ಹೌದು…2026 ಜನವರಿ 15..ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮ…ಅದೇ ದಿನ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಸುಮಾರು 500 ಕೋಟಿ ಅಧಿಕ ಬಜೆಟ್ ನೊಂದಿಗೆ ಸೆಟ್ಟೇರಿರೋ ಸಿನಿಮಾ ಜನನಾಯಕನ್.. ಈ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗಿದೆ..ಅದ್ರಲ್ಲಿ ಪ್ರಮುಖ ಕಾರಣವೆಂದ್ರೆ, ಇದು ದಳಪತಿ ವಿಜಯ್ ಅಭಿನಯದ 69ನೇ ಸಿನಿಮಾ ಮತ್ತು ಸಿನಿ ಬದುಕಿನಿಂದ ನಿವೃತ್ತಿ ಪಡೆದು ಫುಲ್ ಟೈಂ ರಾಜಕಾರಣಿಯಾಗೋಕೆ ಹೊರಟಿರೋ ವಿಜಯ್ ಕೊನೆಯ ಸಿನಿಮಾ

ಹೌದು… ಕೆವಿಎನ್ ಪ್ರೊಡಕ್ಷನ್ಸ್ ಅಂದ್ರೆನೇ ಹಾಗೆ..ದೇಶದ ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೈಲಿಗಲ್ಲನ್ನೇ ಸ್ಥಾಪಿಸಿದೆ.. ಕನ್ನಡದಲ್ಲಿ ಇದೀಗ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದೆ.. ಸಿನಿಮಾ ಅದ್ದೂರಿಯಾಗಿ ಮೂಡಿ ಬರಬೇಕು ಅನ್ನೋದು ಕೆವಿಎನ್ ಪ್ರೊಡಕ್ಷನ್ಸ್ ಒನ್ ಲೈನ್ ಅಜೆಂಡಾ…ಮತ್ತೊಂದು ಪ್ರಮುಖ ಅಜೆಂಡಾ ಅಂದ್ರೆ, ಅದು ಹಣ ಕೊಟ್ಟು ಸಿನಿಮಾ ನೋಡುವ ಸಿನಿರಸಿಕರಿಗೆ ಮೋಸವಾಗಬಾರದು..ಸಿನಿಮಾ ನೋಡಿ ಎದ್ದು ಹೊರಬರುವ ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮಾಡುವ ಗುರಿ ಕೆವಿಎನ್ ಪ್ರೊಡಕ್ಷನ್ಸ್ ರದ್ದು…

ಇದೀಗ ತಮಿಳು ಚಿತ್ರರಂಗಕ್ಕೆ ಕಾಲಿಡೋ ಮೂಲಕ ಬಿಗ್ ಸರ್ಪ್ರೈಸ್ ನೀಡಿದೆ… ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಕನ್ನಡದಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಇದೀಗ ಇಳಯದಳಪತಿ ವಿಜಯ್ 69ನೇ ಚಿತ್ರ ಕೆವಿಎನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ…
ದಳಪತಿಯ 69ನೇ ಚಿತ್ರ ಇದಾಗಿದ್ದು, 500 ಕೋಟಿಗೂ ಅಧಿಕ ಬಜೆಟ್ನಲ್ಲಿ ಚಿತ್ರ ತಯಾರಾಗುತ್ತಿದ್ದು, ಈಗಾಗಲೇ ದೊಡ್ಡ ಬಜೆಟ್ನಲ್ಲಿ ಕೆವಿಎನ್ ಕೆ ವೆಂಕಟ್ ನಾರಾಯಣ್ ಅವರು ಬಂಡವಾಳ ಹೂಡಿದ್ದಾರೆ…ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ… ಇನ್ನು ಈ ಸಿನಿಮಾ ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನ ತೆರೆ ಮೇಲೆ ಅಬ್ಬರಿಸಲಿದೆ.. ಜನನಾಯಕನ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೆ ಇಡೀ ದಕ್ಷಿಣ ಭಾರತ ಕಾಯುತ್ತಿದೆ…

ಈ ಸಿನಿಮಾಗೆ ಬಂಡವಾಳ ಹಾಕಿರುವ ಕೆವಿಎನ್ ಪ್ರೊಡಕ್ಷನ್ಸ್ ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡುತ್ತಿದೆ…ಅದು ಕೆವಿಎನ್ ಪ್ರೊಡಕ್ಷನ್ ಸ್ಟೈಲ್ ಕೂಡ… ಅವರು ಯಾವುದೇ ಸಿನಿಮಾ ಮಾಡಲಿ, ನಿರ್ಮಾಣದಲ್ಲಿ ಸಣ್ಣದೊಂದು ಹುಳುಕು ಹುಡುಕೋದು ಕಷ್ಟ…ಕೆವಿಎನ್ ಮತ್ತು ದಳಪತಿ ಒಂದಾಗಿ ಜನನಾಯಕನ ಸಿದ್ದತೆಯಲ್ಲಿ ತೊಡಗಿದ್ದಾರೆ… ಇನ್ನು ವಿದಾಯದ ಸಿನಿಮಾ ಅಂದ್ಮೇಲೆ ಏನೆಲ್ಲ ಇರಬೇಕೋ ಅದೆಲ್ಲವೂ ಇರುತ್ತದೆ ಅಂತ ಹೇಳಲಾಗ್ತಿದೆ… ಈ ಸಿನಿಮಾ ಮೂಲಕ ಒಬ್ಬ ದಳಪತಿಗೆ ಯೋಗ್ಯವಾದ ವಿದಾಯವೇ ಸಿಗುತ್ತಿದೆ… ಈ ನಿಟ್ಟಿನಲ್ಲಿ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ…

ಎನ್ ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮಾಡಿರುವ ಸಿನಿಮಾ ಕೋಟ್ಯಾನುಕೋಟಿ ದಳಪತಿ ವಿಜಯ್ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್… ಒಂದು ಕಡೆ ಹಬ್ಬದ ಸಂಭ್ರಮ ಅವತ್ತು ಮನೆ ಮಾಡಿರುತ್ತೆ…ಮತ್ತೊಂದು ಕಡೆ ದಳಪತಿ ವಿಜಯ್ ಅದ್ದೂರಿ ಬೀಳ್ಕೊಡುಗೆ ಈ ಸಿನಿಮಾ ಮೂಲಕ ಸಿಗಲಿದೆ…ಜನನಾಯಕನ್ ನೋಡೋದಿಕ್ಕೆ ಜನ ಕೂಡ ಕಾತುರದಿಂದ ಕಾಯುತ್ತಿದ್ದಾರೆ…
ಸಖತ್ ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಒಳ್ಳೆ ಹೆಸರು ಮಾಡಿದೆ… ಪೊಗರು, ಆರ್ ಆರ್ ಆರ್, ಸೀತಾರಾಮಂ, 777 ಚಾರ್ಲಿ, ಕೃಷ್ಣಂ ಪ್ರಣಯ ಸಖಿ, ಮಾರ್ಟಿನ್…ಹೀಗೆ ಅನೇಕ ಸಿನಿಮಾಗಳ ಹಂಚಿಕೆ ಕೆಲಸ ಮಾಡಿ ಹೆಸರು ಮಾಡಿದೆ.. ಇನ್ನು ನಿರ್ಮಾಣದ ವಿಚಾರಕ್ಕೆ ಬಂದ್ರೆ, ಸಖತ್, ಬೈಟ್ ಲವ್, ಕೆಡಿ ದಿ ಡೆವಿಲ್, ಇದೀಗ ತಮಿಳು ಚಿತ್ರರಂಗಕ್ಕೆ ದಳಪತಿ ವಿಜಯ್ ಸಿನಿಮಾ ನಿರ್ಮಾಣದ ಮೂಲಕ ಎಂಟ್ರಿ ಕೊಟ್ಟಿದೆ…ಆಲ್ ದಿ ಬೆಸ್ಟ್ ಕೆವಿಎನ್ ಪ್ರೊಡಕ್ಷನ್ಸ್

spot_img

More articles

LEAVE A REPLY

Please enter your comment!
Please enter your name here