Thursday, January 8, 2026

ಯೋನೆಕ್ಸ್ ಸನ್‌ರೈಸಸ್ ಕರ್ನಾಟಕ ಸ್ಟೇಟ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್; ಮಹಿಳೆಯರ ಡಬಲ್ಸ್ ನಲ್ಲಿ ಶಾಲಿನಿ ರಾಜೇಶ್ ಶೆಟ್ಟಿ ಮತ್ತು ಬಾನು‌ ಎಸ್. ವಿನ್ನರ್ಸ್

Must read

ಉಡುಪಿ: ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ​ನಲ್ಲಿ ಫೆಬ್ರವರಿ 7 ಮತ್ತು 8 ರಂದು ನಡೆದ ಯೋನೆಕ್ಸ್ ಸನ್‌ರೈಸಸ್ ಕರ್ನಾಟಕ ಸ್ಟೇಟ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಉಡುಪಿಯ ಶಾಲಿನಿ ರಾಜೇಶ್ ಶೆಟ್ಟಿ ಅವರು ಮಹಿಳೆಯರ ಡಬಲ್ಸ್ ನಲ್ಲಿ ವಿನ್ನರ್ಸ್, ಸಿಂಗಲ್ಸ್ ಹಾಗೂ ಮಿಶ್ರ ಡಬಲ್ಸ್ ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಾರ್ಚ್ 16ರಿಂದ 22 ರವರೆಗೆ ಗೋವಾದಲ್ಲಿ ನಡೆಯಲಿರುವ ರಾಷ್ಟೀಯ ಚಾಂಪಿಯನ್ ಶಿಪ್ ಟೂರ್ನಿಮೆಂಟ್ ನ ಮೂರು ವಿಭಾಗಗಳಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಡಬಲ್ಸ್ ಪಾಲುದಾರ ಬಾನು ಎಸ್. ಬೆಂಗಳೂರು, ಮಿಶ್ರ ಡಬಲ್ಸ್ ಗೌತಮ್ ಶೆಟ್ಟಿ ಕುಂದಾಪುರ ಪಾಲುದಾರರಾಗಿದ್ದಾರೆ.

ಶಾಲಿನಿ ಶೆಟ್ಟಿ ಮತ್ತು ಬಾನು ಭಾರತದ 50+ ಮಹಿಳೆಯರ ವಿಭಾಗದಲ್ಲಿ ಟಾಪ್ 1 ರ‌್ಯಾಂಕಿಂಗ್ ನಲ್ಲಿದ್ದಾರೆ. 2025 ರ ಜನವರಿ 22 ರಿಂದ 28 ರವರೆಗೆ ನಡೆದ ಯೋನೆಕ್ಸ್ ಸನ್‌ರೈಸ್ ಆಲ್ ಇಂಡಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಹಾಗೂ ಪಂಚಕುಲ ಹರಿಯಾಣದಲ್ಲಿ ನಡೆದ ಮಹಿಳೆಯರ ಡಬಲ್ಸ್ ನಲ್ಲಿ ಕೂಡ ಈ ತಂಡ ಗೆದ್ದಿದೆ.

spot_img

More articles

LEAVE A REPLY

Please enter your comment!
Please enter your name here