Wednesday, January 22, 2025

ಗಂಗೊಳ್ಳಿ: ಪಿಡಿಓ‌, ದ್ವಿತೀಯ ದರ್ಜೆ ಗುಮಾಸ್ತ ಲೋಕಾಯುಕ್ತ ಬಲೆಗೆ

Must read

ಉಡುಪಿ: ಗಂಗೊಳ್ಳಿ ಪಂಚಾಯತ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಪಿಡಿಓ‌ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಶೇಖರ ಜಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.

ನೈನ್ ಲವೆನ್ ( 9/11) ಮಾಡಿಕೊಡಲು ಪಿಡಿಒ 20 ಸಾವಿರ ಲಂಚ ಕೇಳಿದ್ದ. 9/11 ಮಾಡಿಸಲು ದ್ವಿತೀಯ ದರ್ಜೆ ಗುಮಾಸ್ತ 2 ಸಾವಿರ ರೂಪಾಯಿ ಹಣ ಪಡೆದಿದ್ದ. ಒಟ್ಟು 22 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಓ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಮ್ಮದ್ ಹನೀಫ್ ಎಂಬವರ ದೂರಿನ ಮೇಲೆ‌ ಈ ಕಾರ್ಯಾಚರಣೆ ನಡೆದಿತ್ತು. ಪ್ರಭಾರ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ.

spot_img

More articles

LEAVE A REPLY

Please enter your comment!
Please enter your name here