ಉಡುಪಿ: ನಿಯಂತ್ರಣ ತಪ್ಪಿದ ಟ್ಯಾಂಕರ್ ವೊಂದು ಮಗುಚಿ ಬಿದ್ದ ಘಟನೆ ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಸಂತಕಟ್ಟೆಯಲ್ಲಿ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿದ್ದು, ಅಂಡರ್ ಪಾಸ್ ಗಾಗಿ ಅಗೆದಿರುವ ಹೊಂಡಕ್ಕೆ ಮೇಲೆಯಿಂದ ಸಂಚರಿಸುತ್ತಿದ್ದ ಆಯಿಲ್ ಸಾಗಾಟದ ಟ್ಯಾಂಕರ್ ಉರುಳಿಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಳಂಬ ಕಾಮಗಾರಿಯಿಂದಾಗಿ ವಾಹನ ಸವಾರರು ಈ ಹೆದ್ದಾರಿಯಲ್ಲಿ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ದಿನನಿತ್ಯ ಹೆದ್ದಾರಿ ಇಲಾಖೆಗೆ, ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.