Thursday, September 19, 2024

ಕಿನ್ನಿಮೂಲ್ಕಿ: ಗೂಡ್ಸ್ ವಾಹನ- ಕಾರು ಮಧ್ಯೆ ಭೀಕರ ಅಪಘಾತ

Must read

ಉಡುಪಿ: ಗೂಡ್ಸ್ ವಾಹನ ಹಾಗೂ ಕಾರು ಮಧ್ಯೆ ಭೀಕರ ಅಪಘಾತ ಸಂಭವಿಸಿದ ಘಟನೆ ಕಿನ್ನಿಮೂಲ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಇಂದು ಸಂಜೆ ನಡೆದಿದೆ.

ಅಂಬಲಪಾಡಿ ಜಂಕ್ಷನ್ ನಿಂದ ಕಟಪಾಡಿ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಅಂಬಲಪಾಡಿ ಜಂಕ್ಷನ್ ಕಡೆ ಹೋಗುತ್ತಿದ್ದ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಗೂಡ್ಸ್ ವಾಹನ ಪಲ್ಟಿಯಾಗಿ ರಸ್ತೆಯ ಬದಿಗೆ ಬಿದ್ದಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

spot_img

More articles

LEAVE A REPLY

Please enter your comment!
Please enter your name here