ಉಡುಪಿ: ಕಳೆದ 25 ವರ್ಷಗಳಿಂದ ವೀಸಾ ಸಂಸ್ಕರಣೆ, ದಸ್ತಾವೇಜುಗಳ ಪ್ರಕ್ರಿಯೆ, ಲೆಕ್ಕಪತ್ರಗಳ ಅಣಿಗೊಳಿಸುವಿಕೆ ಮತ್ತು ಪೂರೈಕೆ ಇತ್ಯಾದಿ ವಿಭಾಗದಲ್ಲಿ ಸೇವೆ ನೀಡುತ್ತಿರುವ ಕಾಲೂರ್ ಕೇರಳ ಮೂಲದ ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಶಾಖೆಯು ಮಣಿಪಾಲದಲ್ಲಿ ಆರಂಭಗೊಳ್ಳುತ್ತಿದೆ.
ಈ ಬಗ್ಗೆ ಉಡುಪಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಸ್ಥೆಯ ಮಣಿಪಾಲ ಶಾಖಾ ಮುಖ್ಯಸ್ಥೆ ಆಶಾ ಕೃಷ್ಣಮೂರ್ತಿ ಭಟ್ ಅವರು, ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿಯ ಶಾಂಭವಿ crystal Biz Hub ಕಟ್ಟಡದಲ್ಲಿ ಇದೇ 22ರಂದು ಸಂಸ್ಥೆಯ ನೂತನ ಶಾಖೆ ಆರಂಭಗೊಳ್ಳಲಿದೆ. ಅಂದು ಬೆಳಿಗ್ಗೆ 10ಗಂಟೆಗೆ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನದ ಮುಖ್ಯಸ್ಥ ಡಾ. ಮೋಹನ ಆಳ್ವ, ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ. ಆರ್.ರಾಮು.ಎಲ್, ಮಾಹೆಯ ಡಿಓಸಿ ನಿರ್ದೇಶಕ ಡಾ. ಸಂದೀಪ ಎಸ್. ಹಾಗೂ ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥ ಅಡ್ವೋಕೇಟ್ ಜಸ್ಟಿ ಮಾಥ್ಯುಸ್.ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಜುಬಿರೀಚ್ ಕನ್ಸಲ್ಟೆನ್ಸಿ ಪ್ರೈವೇಟ್ ಲಿಮಿಟೆಡ್ ವಿದೇಶಗಳಲ್ಲಿ ವ್ಯಾಸಂಗ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಒತ್ತಡ ರಹಿತ ಮುಕ್ತ ಪಾರದರ್ಶಕ ರೀತಿಯಲ್ಲಿ ಪ್ರವೇಶಾತಿ ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದು, ಈ ದಿಸೆಯಲ್ಲಿ ವಿಶ್ವಾಸನೀಯ ಸಂಸ್ಥೆಯೊಂದು ಏಜೆನ್ಸಿ ಮನ್ನಣೆಗಳಿಸಿದೆ.
ನುರಿತ ಪರಿಣತ ಸಲಹೆಗಾರರಿಂದ ಕೂಡಿದ ಹಲವು ತಂಡಗಳು ಸಂಸ್ಥೆಯ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅಧ್ಯಯನಾಸಕ್ತ ಅಭ್ಯರ್ಥಿಗಳಿಗೆ ವಿದೇಶಗಳ ಬೇರೆ ಬೇರೆ ಕಾಲೇಜು ಯೂನಿವರ್ಸಿಟಿಗಳ ಬಗ್ಗೆ ಮಾಹಿತಿಗಳನ್ನು ನೀಡುವುದು. ಮಾತ್ರವಲ್ಲದೆ ಅಲ್ಲಿಯ ಅಧಿಕಾರಿಗಳೊಂದಿಗೆ ವರ್ಚುವಲ್ ಮುಖೇನ ಸಂಪರ್ಕ ಕಲ್ಪಿಸಿ ಕೊಡುತ್ತಾರೆ. ಜುಬಿರೀಚ್ ಸಂಸ್ಥೆಯು ಇಂದಿನವರೆಗೆ ಶೇ. 99 ಯಶಸ್ವಿ ವೀಸಾಗಳಿಕೆಗಾಗಿ ಪ್ರಸಿದ್ಧವಾಗಿದೆ. ಸಂಸ್ಥೆಯ ಮೂಲಕ ವೀಸಾ ಹೊಂದಿ ನಾನ ವಿದೇಶಿಯ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು ಇದನ್ನು ಒಮ್ಮತದಿಂದ ಸ್ವೀಕರಿಸುತ್ತಾರೆ. ಯಾವುದೇ ಶುಲ್ಕವಿಲ್ಲದ ವೀಸಾ ಪ್ರಕ್ರಿಯೆ ಸಂಸ್ಥೆಯಲ್ಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಹುಲ್ ಭಟ್, ಲಕ್ಷ್ಮೀ ಗುರುರಾಜ್ ಉಪಸ್ಥಿತರಿದ್ದರು.