ಉಡುಪಿ: ಪಿತ್ರೋಡಿ ವೆಂಕಟರಮಣ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ಸ್ ನ 36ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯ್ದ ತಂಡಗಳ ರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟ ‘ವೆಂಕಟರಮಣ ಟ್ರೋಫಿ’ ಫೆ.9, 10 ಮತ್ತು 11ರಂದು ಕಟಪಾಡಿ ಪಳ್ಳಿಗುಡ್ಡೆ ಎಸ್‌ವಿಎಸ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ನವೀನ್ ಸಾಲ್ಯಾನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ಕಡೆಗಳ ಒಟ್ಟು 18 ತಂಡಗಳು ಈ ಪಂದ್ಯಕೂಟದಲ್ಲಿ ಭಾಗವಹಿಸಲಿವೆ. ಪಂದ್ಯಕೂಟವನ್ನು ಬೆಳಿಗ್ಗೆ 9.30ಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದರು.
ವಿಜೇತ ತಂಡಗಳಿಗೆ ಪ್ರಥಮ 3 ಲಕ್ಷ ರೂ. ನಗದು ಮತ್ತು ಟ್ರೋಫಿ, ದ್ವಿತೀಯ 1.5ಲಕ್ಷ ರೂ. ನಗದು ಮತ್ತು ಟ್ರೋಫಿ ನೀಡಲಾಗುವುದು. ಅದೇ ರೀತಿ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‌ಮೆನ್, ಶಿಸ್ತಿನ ತಂಡ ಪ್ರಶಸ್ತಿ ನೀಡಲಾಗುವುದು. ಮದ್ಯಪಾನ, ತಂಬಾಕು ಸೇವಿಸಿ ಆಡಲು ಅವಕಾಶ ವಿಲ್ಲ. ಅದಕ್ಕಾಗಿ ಮದ್ಯಪಾನ ಪರೀಕ್ಷಾ ಯಂತ್ರ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಜಿತೇಂದ್ರ ಶೆಟ್ಟಿ, ಗಂಗಾಧರ ಕರ್ಕೇರ, ವಿಜಯ ಕೋಟ್ಯಾನ್, ಪ್ರವೀಣ್ ಕುಮಾರ್, ಉಮೇಶ್ ಕರ್ಕೇರ ಉಪಸ್ಥಿತರಿದ್ದರು