Friday, September 20, 2024

ಉಡುಪಿ: ರಾಯಲ್ ಸೋಡಾ ಫ್ಯಾಕ್ಟರಿ ಮಾಲೀಕನಿಗೆ ಹಣಕ್ಕಾಗಿ ಬೇಡಿಕೆ ಮತ್ತು ಸುಲಿಗೆ ಯತ್ನ ಪ್ರಕರಣ

Must read

ಉಡುಪಿ: 2019ರ ಮಾರ್ಚ್ 13ರಂದು ಉಪ್ಪೂರು ಗ್ರಾಮದ ರಾಯಲ್ ಸೋಡ ಫ್ಯಾಕ್ಟರಿ ಮಾಲೀಕ ರತ್ನಾಕರ ಶೆಟ್ಟಿ ಎಂಬವರಿಗೆ ಹಣಕ್ಕಾಗಿ ಬೇಡಿಕೆ ಮತ್ತು ಸುಲಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ಬನ್ನಂಜೆ ರಾಜನ ಐವರು ಸಹಚರರೊಲ್ಲೊಬ್ಬರು ಎನ್ನಲಾದ ಧನರಾಜ್ ಸಾಲಿಯಾನ್ ಎಂಬ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ನ ಆದೇಶವು ನ್ಯಾಯಸಮ್ಮತವಲ್ಲ ಎಂದು ರಾಜ್ಯ ಸರಕಾರಿ ಅಭಿಯೋಜಕರು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ ಎಂದು ಒಳಾಡಳಿತ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಭೆಯು ನಿರ್ಣಯಿಸಿದೆ.

ಪ್ರಕರಣದ ಹಿನ್ನೆಲೆ: ಉಡುಪಿ ತಾಲೂಕು ಉಪ್ಪೂರು ಗ್ರಾಮದ ರಾಯಲ್ ಸೋಡ ಫ್ಯಾಕ್ಟರಿ ಮ್ಝಾಕ ರತ್ನಾಕರ ಶೆಟ್ಟಿ ಎಂಬವರಿಗೆ 2019ರ ಮಾರ್ಚ್ 13ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇರಿಸಿದ್ದರು. ಹಣ ಕೊಡದಿದ್ದರೇ ಕೊಲೆ ಮಾಡುವುದಾಗಿ ತುಳು ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದರು. ಈ ಕುರಿತು ರತ್ನಾಕರ ಶೆಟ್ಟಿ ಎಂಬವರು ದೂರು ನೀಡಿದ್ದರು.

ಇದನ್ನಾಧರಿಸಿ ಉಡುಪಿ ಪೊಲೀಸರು ಐಪಿಸಿ 1860 (384,385, 387 507, 504, 506, 201, 109, 120(ಬಿ) 364 ಎ, 397, ) ಮತ್ತು ಕೋಕಾ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಶಶಿ ಪೂಜಾರಿ ಅಲಿಯಾಸ್ ಶ್ಯಾಡೋ (28), ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ (30), ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಅಲಿಯಾಸ್ ರಾಕ್ (26), ಧನರಾಜ್ ಸಾಲಿಯಾನ್ ಅಲಿಯಾಸ್ ಧನು ಕೋಲಾ (30) ಮತ್ತು ಉಲ್ಲಾಸ್ ಶೆಣೈ ಅಲಿಯಾಸ್ ಉಲ್ಲಾಸ್ (27)ಎಂಬವರನ್ನು ಬಂಧಿಸಲಾಗಿತ್ತು.

ಈ ಕುರಿತು 6 ಮಂದಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಧನರಾಜ್ ಸಾಲಿಯಾನ್ ಎಂಬವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯವು ತಿರಸ್ಕರಿಸಿತ್ತು. ಹೀಗಾಗಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ಅರ್ಜಿಯನ್ನು ಆಲಿಸಿದ್ದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ನೇತೃತ್ಚದ ಪೀಠವು 2023ರ ಅಕ್ಟೋಬರ್ 13ರಂದು 5ನೇ ಆರೋಪಿಯಾಗಿರುವ ಧನರಾಜ್ ಸಾಲಿಯಾನ್ ಎಂಬಾತನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶಿಸಿತ್ತು.


ಉಚ್ಛ ನ್ಯಾಯಾಲಯವು ತನ್ನ ಆದೇಶದಲ್ಲಿ ಅಭಿಯೋಜನೆಯು ಒಡ್ಡಿದ ಎಲ್ಲ ಸಂಗತಿಗಳನ್ನು ಪರಿಗಣಿಸದೇ ಆದೇಶ ಹೊರಡಿಸಿರುವುದು ನ್ಯಾಯಸಮ್ಮತವಲ್ಲದ ಕಾರಣ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ,’ ಎಂದು ರಾಜ್ಯ ಸರಕಾರಿ ಅಭಿಯೋಜಕರು ಅಭಿಪ್ರಾಯಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಇದೇ ಪ್ರಕರಣದಲ್ಲಿ 6ನೇ ಆರೋಪಿ ಮತ್ತು 4ನೇ ಆರೋಪಿಯ ಸೋದರನಾದ 2ನೇ ಆರೋಪಿಯು ಸಲ್ಲಿಸಿದ್ದ ಜಾಮೀನು ಅರ್ಜಿಗಳು ವಜಾಗೊಂಡಿದ್ದವು.

spot_img

More articles

LEAVE A REPLY

Please enter your comment!
Please enter your name here