Tuesday, December 3, 2024

ನ.30ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ‘ತುಳು ಮಿನದನ-2024″ ಕಾರ್ಯಕ್ರಮ; ಬಿ. ಜಯಕರ ಶೆಟ್ಟಿ ಇಂದ್ರಾಳಿ

Must read

ಉಡುಪಿ: ತುಳುಕೂಟ ಉಡುಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಜೈ ತುಳುನಾಡ್ ಉಡುಪಿ, ರೋಟರಿ ಕ್ಲಬ್ ಕಲ್ಯಾಣಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ತುಳು ಮಿನದನ-2024” ಕಾರ್ಯಕ್ರಮವನ್ನು ಇದೇ ನ.30ರಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ತುಳುಕೂಟದ ಅಧ್ಯಕ್ಷೆ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ವೈಯಕ್ತಿಕ ವಿಭಾಗದಲ್ಲಿ ‘ಎಲ್ಯ ತುಳು ಕತೆ ತುಳು ಲಿಪಿಟೇ ಬರೆಲೆ ಸೋಡಾಪಾಡ್’, ‘ತುಳು ಚುಂಗುಡಿ (ಚುಟುಕು) ಬರೆಲೆ ಸೋಡಾಪಾಡ್’ ಹಾಗೂ ‘ಸಟಕ್ಕ ಪಾತೆರ್ಲೆ’ ಸ್ಪರ್ಧೆ ನಡೆಯಲಿದೆ. ಗುಂಪು ವಿಭಾಗದಲ್ಲಿ ಪೊಟ್ಟು ಭಾಸೆನ್ ಸಕ್ಕ ತೆರಿಲೆ, ಸೆಬಿ ಸವಾಲ್, ಮಾಜಿದ್ ಪೋಯಿನಿ ತುಳುವ ಗೊಬ್ಬುಲೆನ ತೂಪರಿಕೆ ಹಾಗೂ ಗುಂಪು ಪದ ಪನ್ಲೆ ಸ್ಪರ್ಧೆ ಜರುಗಲಿದೆ. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಅತಿ ಹೆಚ್ಚು ಅಂಕ ಪಡೆಯುವ ಕಾಲೇಜಿನ ಸುಮನಾ ಮಾಧವ ಶೆಟ್ಟಿ ಕುಕ್ಕೆಹಳ್ಳಿ ತುಳು ಮಿನದನ ಚಾಂಪಿಯನ್ ಶಿಪ್ ವಿಶೇಷ ಫಲಕ ನೀಡಲಾಗುವುದು ಎಂದು ಕಾರ್ಯಕ್ರಮದ ಸಂಚಾಲಕ ವಿ.ಕೆ. ಯಾದವ್ ತಿಳಿಸಿದರು.

ವಿದ್ಯಾರ್ಥಿ ತುಳು ಕವಿಗೋಷ್ಠಿ ನಡೆಯಲಿದ್ದು, ಒಂದು ಕಾಲೇಜಿನಿಂದ ಓರ್ವ ವಿದ್ಯಾರ್ಥಿ ಭಾಗವಹಿಸಬಹುದು. ಸಂಜೆ 3.30ಕ್ಕೆ ಸಮಾರೋಪ ನಡೆಯಲಿದ್ದು, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕವಿಗೋಷ್ಠಿಯ ಅಧ್ಯಕ್ಷ ಗಂಗಾಧರ್ ಕಿದಿಯೂರು, ಕೆಮ್ತೂರು ತುಳುನಾಟಕದ ಸಂಚಾಲಕ ಪ್ರಭಾಕರ ಭಂಡಾರಿ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪಿಆರ್ ಒ ರವಿನಂದನ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here