Friday, September 20, 2024

ಗಂಗೊಳ್ಳಿ: ಕುಡಿದ ಮತ್ತಿನಲ್ಲಿ ಎರ‌್ರಾಬಿರ‌್ರಿಯಾಗಿ ಟ್ರಾವೆಲರ್ ಚಲಾಯಿಸಿದ ಪೊಲೀಸ್ ಪೇದೆ; ಆಟೋ, ಬೈಕ್ ಸಹಿತ ಹಲವು ವಾಹನಗಳು ಜಖಂ

Must read

ಉಡುಪಿ: ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆಯೊಬ್ಬರು ಎರ‌್ರಾಬಿರ‌್ರಿಯಾಗಿ ಟ್ರಾವೆಲರ್ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ನಡೆದಿದೆ.


ಉಡುಪಿ ಡಿಎಆರ್ ವಿಭಾಗದ ಪೊಲೀಸರೊಬ್ಬರು ಬೇಕಾಬಿಟ್ಟಿ ವಾಹನ ಚಲಾಯಿಸಿದ ಚಾಲಕ. ಕಾರ್ಯಕ್ರಮದ ನಿಮಿತ್ತ ಬಂದೋಬಸ್ತಿಗಾಗಿ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಪ್ರಶಾಂತ್ ಕುಡಿದ ಮತ್ತಿನಲ್ಲಿ ಇಲಾಖೆಗೆ ಸೇರಿದ ಸರಕಾರಿ ವಾಹನವನ್ನು ಎರ‌್ರಾಬಿರ‌್ರಿಯಾಗಿ ಚಲಾಯಿಸಿ ಆಟೋ, ಬೈಕ್ ಸಹಿತ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಎಆರ್ ವಿಭಾಗದ ಸಿಬ್ಬಂದಿಯ ವರ್ತನೆಗೆ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here