ಉಡುಪಿ: ಡಿಸೆಂಬರ್ 31 ಹೊಸ ವರ್ಷದ ಸಂಭ್ರಮಾಚರಣೆಗೆ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ 108 ಆರೋಗ್ಯ ಕವಚ ಆಂಬುಲೆನ್ಸ್ ಗಳು ತುರ್ತು ಸೇವೆಗೆ ಸನ್ನದ್ದವಾಗಿವೆ.
ಉಡುಪಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಉಡುಪಿ ಜಿಲ್ಲೆಯಲ್ಲಿ 108 ಆರೋಗ್ಯ ಕವಚ ಅಡಿಯಲ್ಲಿ ಬರುವಂತಹ ಎಲ್ಲಾ ಆಂಬ್ಯುಲೆನ್ಸ್ ಗಳು ಮುಂಜಾಗ್ರತವಾಗಿ ಕಾರ್ಯನಿರ್ವಹಿಸಲು ಸಜ್ಜಾಗಿವೆ.
ಬೇಕಾದ ಎಲ್ಲಾ ರೀತಿಯ ಸಲಕರಣೆಗಳನ್ನು ತಯಾರಿ ಮಾಡಿಕೊಂಡಿದ್ದು ಯಾವುದೇ ಸಮಯದಲ್ಲಿ ಅಪಘಾತ ಅಥವಾ ಇನ್ನಿತರ ಯಾವುದೇ ತೊಂದರೆ ಆದಲ್ಲಿ ಮುಂಜಾಗ್ರತವಾಗಿ ಎಲ್ಲಾ ಆಂಬುಲೆನ್ಸ್ ಗಳು ತಯಾರಾಗಿವೆ ಎಂದು ಇ..ಎಮ್.ಆರ್.ಐ. ಗ್ರೀನ್ ಹೆಲ್ತ್ ಸರ್ವಿಸ್ ನ ಉಡುಪಿ ಜಿಲ್ಲೆಯ ಅಧಿಕಾರಿಗಳು ತಿಳಿಸಿರುತ್ತಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇವೆಯಲ್ಲಿ ಗ್ರೀನ್ ಹೆಲ್ತ್ ಸರ್ವಿಸ್ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಗೀಡಾಗಿದ್ದಲ್ಲಿ ತಕ್ಷಣವೇ ಆರೋಗ್ಯ ಕವಚ ಸಹಾಯವಾಣಿ 108ಕೆ ಉಚಿತ ಸಂಖ್ಯೆಗೆ ಕರೆ ಮಾಡಿ ಅಂಬ್ಯುಲೆನ್ಸ್ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.