Thursday, November 21, 2024

ಆಟಗಾರರು ಶಿಸ್ತನ್ನು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುವಂತಾಗಬೇಕು: ಎಂ.ಚಂದ್ರಶೇಖರ ಕಲ್ಕೂರ

Must read

ಬ್ರಹ್ಮಾವರ: ಶ್ರೀನಿಕೇತ ಶಾಲೆ ಮಟಪಾಡಿ ಬ್ರಹ್ಮಾವರ ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಹಳೆ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ ಬ್ರಹ್ಮಾವರ ಗಾಳಿಮನೆ ನಡೂರು ದಿ.ಶಿವರಾಮ ಶೆಟ್ಟಿ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಶಾಲಾ ಶ್ರೇಯೋಭಿವೃದ್ದಿಗಾಗಿ ಪ್ರಪ್ರಥಮ ಬಾರಿಗೆ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶ್ರೀನಿಕೇತನ ಕಪ್ ಮತ್ತು ದಿ| ಲಲಿತಾ ಬಿ.ಹೆಗ್ಡೆ ಸ್ಮರಣಾರ್ಥ ಶ್ರೀನಿಕೇತನ ಪ್ರೀಮಿಯರ್ ಲೀಗ್ 2023 ರ ಉದ್ಘಾಟನಾ ಸಮಾರಂಭ ಮಟಪಾಡಿ ಶಾಲಾ ಮೈದಾನದಲ್ಲಿ ನಡೆಯಿತು.


ಸಭಾಧ್ಯಕ್ಷತೆ ವಹಿಸಿದ ಬಿಎಸ್ಎನ್ಎಲ್ ನಿವೃತ್ತಿ ಮಹಾ ಪ್ರಬಂಧಕರಾದ ಎಂ.ಚಂದ್ರಶೇಖರ ಕಲ್ಕೂರ ಕಾರ್ಯಕ್ರಮವನ್ನು ಉದ್ಘಾಟಿಸಿ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಕೂಟ ನಡೆಯುವುದು ಬಹಳ ಸಂತೋಷ ,ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸುವುದು ಮುಖ್ಯ. ಯುವಜನರು ಹೆಚ್ಚು ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆಯನ್ನು ಮಾಡಬೇಕು. ಆಟಗಾರರು ಶಿಸ್ತನ್ನು ಕಾಪಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುವಂತಾಗಬೇಕು. ಆಟದಲ್ಲಿ ಗೆಲ್ಲುವುದಕ್ಕಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀನಿಕೇತನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಅಶೋಕ ಕುಮಾರ್ ಶೆಟ್ಟಿ , ಪ್ರೌಢಶಾಲೆಯ ನಿವೃತ್ತಿ ಮುಖ್ಯೋಪಾಧ್ಯಯರಾದ ಹರಿಕೃಷ್ಣ ಹೊಳ್ಳ, ನಿವೃತ್ತಿ ಅಧ್ಯಾಪಕರಾದ ರವಿರಾಜ್ ಶೆಟ್ಟಿ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಮುಸ್ತಾಕ್ ಮತ್ತು ಸುಹಾಸ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅತಿಥಿಗಳಾಗಿ ಚಿತ್ತಾರಿ ನಂದಿಕೇಶ್ವರ ದೇವಸ್ಥಾನದ ಮೊಕ್ತೇಸರರಾದ ಗಿರೀಶ್ ಚಂದ್ರ ಆಚಾರ್ಯ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ನೀಲಾವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಶ್ವನಾಥ್ ಶೆಟ್ಟಿ, ದಿ| ಶಿವರಾಮ ಶೆಟ್ಟಿ ಜನ್ಮ ಶತಾಬ್ದಿ ಸಮಿತಿಯ ಅಧ್ಯಕ್ಷರಾದ ರಾಜಾರಾಮ್ ಶೆಟ್ಟಿ , ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ್ ಶೆಟ್ಟಿ, ಶಬೀರ್ ಹುಸೇನ್, ಪ್ರಭಾಕರ್ ಆಚಾರ್ಯ ,ಚಂದ್ರಶೇಖರ್ ನಾಯರಿ ಅಶೋಕ್ ಪೂಜಾರಿ, ಸಂತೋಷ್ ಲುವಿಸ್ ,ಸುರೇಶ್ ಕರ್ಕೇರ ,ಪ್ರಶಾಂತ್ ನೀಲಾವರ, ಭರತ್ ನಾಯಕ್, ರವೀಂದ್ರ ನಾಯಕ್ ,ಮಸೂದ್ ರೆಹಮಾನ್, ಮನೋಜ್ ನಾಯಕ್, ಪವಿತ್ರ ಪೂಜಾರಿ ಉಪಸ್ಥಿತರಿದ್ದರು.


ಶ್ರೀನಿಕೇತನ ಪ್ರೌಢಶಾಲೆ ಮುಖ್ಯೋಪಾಧ್ಯಯರಾದ ಪ್ರವೀಣ್ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಶರೋನ್ ಸಿಕ್ವೇರಾ ವಂದಿಸಿ, ಚೇತನ್ ಪೂಜಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಬ್ರಹ್ಮಾವರ ವಲಯ ಆಹ್ವಾನಿತ ತಂಡಗಳು ಮತ್ತು ಸ್ಥಳೀಯ ಫ್ರಾಂಚೈಸಿ ತಂಡಗಳ ವಾಲಿಬಾಲ್ ಪಂದ್ಯಕೂಟವು ನಡೆಯಿತು.

spot_img

More articles

LEAVE A REPLY

Please enter your comment!
Please enter your name here