Saturday, July 27, 2024

ಮುಂಬೈ ಇಂಡಿಯನ್ಸ್‌ ಗೆ ಬಿಗ್ ಶಾಕ್: ಹಾರ್ದಿಕ್‌ ಪಾಂಡ್ಯ ಐಪಿಎಲ್ ನಿಂದ ಹೊರಕ್ಕೆ.?

Must read

ಮುಂಬೈ: ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್‌ ಐಪಿಎಲ್‌ ತಂಡದ ನಾಯಕನಾಗಿ ಆಯ್ಕೆಯಾದ ಹಾರ್ದಿಕ್‌ ಪಾಂಡ್ಯ ಅವರು ಪಾದದ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಐಪಿಎಲ್‌ ಋತುವಿನಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


ಐಪಿಎಲ್‌ ಆಟಗಾರರ ಹರಾಜಿಗಿಂತ ಮುನ್ನವೇ ಗುಜರಾತ್‌ ಟೈಟನ್ಸ್‌ ತಂಡದಿಂದ ಅವರನ್ನು ಪಡೆದುಕೊಂಡಿದ್ದ ಮುಂಬೈ ಇಂಡಿಯನ್ಸ್‌ ತಂಡ, ಪಾಂಡ್ಯ ಅವರನ್ನು ತಂಡದ ನಾಯಕನೆಂದು ಘೋಷಿಸುವ ಮೂಲಕ ರೋಹಿತ್‌ ಶರ್ಮಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರ ಕೈಗೊಂಡಿತ್ತು.


ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯಾವಳಿಯ ವೇಳೆ ಹಾರ್ದಿಕ್‌ ಅವರ ಪಾದಕ್ಕೆ ಗಾಯವಾಗಿತ್ತು.

spot_img

More articles

LEAVE A REPLY

Please enter your comment!
Please enter your name here