Friday, October 18, 2024

ಮಣಿಪಾಲ: ಎಂಐಟಿಯಲ್ಲಿ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ಉದ್ಘಾಟನೆ

Must read

ಮಣಿಪಾಲ: ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ಮತ್ತು ಎಂಐಟಿಯಲ್ಲಿರುವ ಸಾಂಸ್ಥಿಕ ನಾವೀನ್ಯ ಮಂಡಳಿ [ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ ಆಟ್‌ ಮಣಿಪಾಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ] ಇವುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ದಿ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ಅನ್ನು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಉಪಕುಲಪತಿ ಡಾ. ಎಂ. ಡಿ. ವೆಂಕಟೇಶ್‌ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಡಾ. ಎಂ.ಡಿ. ವೆಂಕಟೇಶ್ ಅವರು ಎಪ್ಪತ್ತೈದು ವರ್ಷಗಳ ಹಿಂದೆ ಡಾ. ಟಿ. ಎಂ. ಎ. ಪೈಯವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರಿರುವುದನ್ನು ಉಲ್ಲೇಖಿಸಿದರು. ‘ಈ ಶಿಕ್ಷಣ ಸಂಸ್ಥೆಗಳನ್ನು ಸಮಾಜದಲ್ಲಿರುವ ಸವಾಲುಗಳಾದ ಅನಕ್ಷರತೆ, ಬಡತನ, ಮತ್ತು ಆನಾರೋಗ್ಯಗಳನ್ನು ನಿವಾರಿಸುವ ಉದ್ದೇಶದಿಂದ ಕಟ್ಟಿ ಬೆಳೆಸಲಾಗಿದೆ. ವಿಶ್ವಸಂಸ್ಥೆಯ 2017ರ ಸುಸ್ಥಿರ ಅಭಿವೃದ್ಧಿಯ ಗುರಿ [ಸಸ್ಟೆನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್‌] ಯೊಂದಿಗೆ ಡಾ. ಟಿ. ಎಂ. ಪೈಯವರ ಕಾಣ್ಕೆ [ವಿಶನ್‌] ಯು ಹೊಂದಿಕೊಳ್ಳುತ್ತದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿಮಣಿಪಾಲ ಸಂಸ್ಥೆಗಳ ಕಾರಣದಿಂದ ಉನ್ನತ ಗುಣಮಟ್ಟದ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸಲು, ಮಕ್ಕಳ ಮೃತ ಪ್ರಮಾಣಗಳನ್ನು ತಗ್ಗಿಸಲು, ಗರ್ಭಿಣಿಯರ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತುಸಮಾಜವನ್ನು ಸಾಕ್ಷರಗೊಳಿಸಲು ಸಾಧ್ಯವಾಗಿದ್ದು ಇದು ಇಡೀ ದೇಶದಲ್ಲಿಯೇ ಗಮನಾರ್ಹ ವಿದ್ಯಮಾನವಾಗಿದೆ.’ ಎಂದರು.


ಭಾರತದ ಪ್ರಧಾನಮಂತ್ರಿಗಳ ಆಶಯವನ್ನು ನೆನಪಿಸಿಕೊಂಡ ಡಾ. ವೆಂಕಟೇಶ್‌ ಅವರು, ‘ಭಾರತ ಯುವಶಕ್ತಿ ಇಡೀ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿದೆ.’ ಎಂದರು.


ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಂಐಟಿಯ ಬದ್ಧತೆಯನ್ನು ಒತ್ತಿ ಹೇಳುತ್ತ, ಎಂಐಟಿಯ ಸಾಮರ್ಥ್ಯವನ್ನು ಗುರುತಿಸಿದ ಶಿಕ್ಷಣ ಸಚಿವಾಲಯ, ಎಐಸಿಟಿಇ ಮತ್ತು ನಾವೀನ್ಯ ಮಂಡಳಿ [ಇನ್ನೋವೇಶನ್‌ ಕೌನ್ಸಿಲ್‌] ಗಳಿಗೆ ಕೃತಜ್ಞತೆ ಹೇಳಿದರು. ಹ್ಯಾಕಥಾನ್‌ 2023 ರಲ್ಲಿ ಭಾಗವಹಿಸಿರುವವರು, ಮಾನವತೆಯನ್ನು ಬಲಗೊಳಿಸಲು ಅಗತ್ಯವಿರುವ ಸಮರ್ಥ ಕೊಡುಗೆಯನ್ನು ನೀಡುವ ಮತ್ತು ದೀರ್ಘಕಾಲೀನ ಪ್ರಭಾವವನ್ನು ಬೀರುವ ಪರಿಹಾರಗಳನ್ನು ನೀಡುವಂತಾಗಲಿ ಎಂದರು. ಭಾರತ ಸರ್ಕಾರದಿಂದ ಆರ್ಥಿಕ ಬೆಂಬಲದಿಂದ ಕಾರ್ಯನಿರ್ವಹಿಸುವ ಮೆಡಿಕಲ್‌ ಡಿವೈಸ್‌ ಡೆವಲಪ್‌ಮೆಂಟ್‌ ಹಬ್‌ ಕೆಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯತೆಗಳನ್ನು ನೀಡಿರುವುದನ್ನುಅವರು ಉಲ್ಲೇಖಿಸಿದರು.


ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ [ಎಂಐಟಿ] ಯಲ್ಲಿ ದ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ನ್ನು ಹಮ್ಮಿಕೊಂಡಿರುವುದು ಗಮನಾರ್ಹವಾಗಿದ್ದು. ಈ ಸಮಾವೇಶವು ಆಯುಷ್‌ ವಿಭಾಗ, ಗುಜರಾತ್‌, ಕೇರಳ ಸರ್ಕಾರಗಳು ಸೂಚಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಗಮನಹರಿಸಿತು. ತಮಿಳುನಾಡು, ಗುಜರಾತ್‌ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಒಟ್ಟು 22 ತಂಡಗಳು ಐದು ದಿನಗಳ ಹ್ಯಾಕಥಾನ್‌ನ್ನು ಯಶಸ್ವಿಗೊಳಿಸಲು ಶ್ರಮಿಸಿದವು.


ಎಂಐಟಿಯ ನಿರ್ದೇಶಕ ಡಾ. (ಸಿಡಿಆರ್) ಅನಿಲ್ ರಾಣಾ, ಡಾ. ರಿಸಿಲ್‌ ಜೋಸೆಫ್‌, ಎಐಸಿಟಿಇನ ಸಹಾಯಕ ನಿರ್ದೇಶಕರಾದ ಕಮಲ್‌ ಸಿಂಗ್‌, ಪೂನಮ್‌, ಎಂಐಟಿಯ ಸಹನಿರ್ದೇಶಕ ಡಾ. ಸೋಮಶೇಖರ್‌ ಭಟ್‌ ಮತ್ತಿತರ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ಯುವ ನವೋದ್ಯಮಿಗಳಲ್ಲಿ ಸಹಭಾಗಿತ್ವವನ್ನು ಹೊಂದಲು. ಸೂಕ್ತವಾದ ಯೋಚನೆಗಳನ್ನು ಬೆಳೆಸಿಕೊಳ್ಳಲು, ಪ್ರಸ್ತುತ ಜಗತ್ತಿನ ಸವಾಲುಗಳಿಗೆ ಪರಿವರ್ತಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವೇದಿಕೆಯನ್ನು ಒದಗಿಸಿದೆ.

spot_img

More articles

LEAVE A REPLY

Please enter your comment!
Please enter your name here