Monday, November 25, 2024

ಉಡುಪಿ: ಹೋಟೆಲ್, ಫಾಸ್ಟ್ ಫುಡ್ ಅಂಗಡಿಗಳಲ್ಲಿ ಹಾನಿಕಾರಕ ಬಣ್ಣ, ರಾಸಾಯನಿಕ ಬಳಸಿದರೆ ಪರವಾನಿಗೆ ರದ್ದು

Must read

ಉಡುಪಿ: ಜಿಲ್ಲೆಯ ಹೊಟೇಲ್ ಮಾಲಕರು ಹಾಗೂ ಫಾಸ್ಟ್ ಫುಡ್ ಅಂಗಡಿಯವರು ತಮ್ಮ ಉದ್ಯಮದಲ್ಲಿ ಹಾನಿಕಾರಕ ಬಣ್ಣ, ಟೆಸ್ಟಿಂಗ್ ಪೌಡರ್, ರಾಸಾಯನಿಕ ಹಾಗೂ ಪೇಪರ್ ಪ್ಲೇಟ್, ಪೇಪರ್ ಗ್ಲಾಸ್ ಮತ್ತು ಟಿಶೂಗಳನ್ನು ಬಳಸದೇ ಮರುಬಳಕೆಯ ವಸ್ತುಗಳಾದ ಸ್ಟೀಲ್ ಲೋಟ, ಸ್ಟೀಲ್ ತಟ್ಟೆಗಳನ್ನು ಕಡ್ಡಾಯವಾಗಿ ಬಳಸಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು.


ನಗರಸಭೆಯ ಪೌರಾಯುಕ್ತರು, ಪರಿಸರ ಅಭಿಯಂತರರು, ಕಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನೀಟರಿ ಸೂಪರ್‌ವೈಸರ್‌ನವರು ಹಾಗೂ ಪೌರಕಾರ್ಮಿಕರು ಈಗಾಗಲೇ ನಗರದ ಹಲವು ಕಡೆ ದಾಳಿ ನಡೆಸಿ, ಹಾನಿಕಾರಕ ಬಣ್ಣ, ಟೆಸ್ಟಿಂಗ್ ಪೌಡರ್‌ನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿರುತ್ತಾರೆ. ಜನವರಿ 1 ರ ನಂತರ ಯಾವುದೇ ಹೋಟೇಲ್, ಫಾಸ್ಟ್ ಫುಡ್ ಅಂಗಡಿ, ಮದುವೆ ಸಭೆ ಸಮಾರಂಭಗಳಲ್ಲಿ ಒಮ್ಮೆ ಬಳಸಿ ಬಿಸಾಡುವ ಪೇಪರ್ ಪ್ಲೇಟ್, ಕಪ್, ಗ್ಲಾಸ್ ಮತ್ತು ಟಿಶೂಗಳನ್ನು ಬಳಸಬಾರದು. ಇವುಗಳ ಬಳಕೆ ಕಂಡುಬಂದಲ್ಲಿ ಉದ್ದಿಮೆ ಪರವಾನಿಗೆಯನ್ನು ರದ್ದು ಪಡಿಸಿ, ದಂಡ ವಿಧಿಸಲಾಗುವುದು.


ಉಡುಪಿ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡುವುದು, ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಪರಿಸರ ಸಂರಕ್ಷಣೆ ಮಾಡಲು ಸಾರ್ವಜನಿಕರು ನಗರಸಭೆಯೊಂದಿಗೆ ಕೈಜೋಡಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here