ಉಡುಪಿ: ಬೈಕ್‌ಗೆ ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಮರ್ಣೆ ಗ್ರಾಮದ ಅಜೆಕಾರು ದೊಡ್ಡಪಲ್ಕೆ ಕ್ರಾಸ್ ಬಳಿ ನ.21ರ ರಾತ್ರಿ ನಡೆದಿದೆ.
ಅಜೆಕಾರು ಬೊಂಡುಕುಮೇರಿಯ ಲೋಕೇಶ್ ಕುಲಾಲ್ (36) ಮೃತಪಟ್ಟವರು.
ನ.21ರಂದು ರಾತ್ರಿ 9 ಗಂಟೆ ಸುಮಾರಿಗೆ ಲೋಕೇಶ್ ಅವರು ಬೈಕ್‌ನಲ್ಲಿ ಅಜೆಕಾರಿನಿಂದ ಮನೆಗೆ ತೆರಳುತ್ತಿದ್ದಾಗ, ದೊಡ್ಡಪಲ್ಕೆ ಕ್ರಾಸ್ ಬಳಿ ಎದುರಿನಿಂದ ಅಜೆಕಾರು ಕಡೆಗೆ ಅತಿವೇಗವಾಗಿ ಬರುತ್ತಿದ್ದ ಕ್ರೇನ್ ರಸ್ತೆ ಬಲಬದಿಗೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಲೋಕೇಶ್ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ಬಳಿಕ ಕ್ರೇನ್ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಲೋಕೇಶ್ ಅವರ ಪರಿಚಯಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜೆಕಾರು: ಬೈಕ್ ಗೆ ಕ್ರೇನ್ ಢಿಕ್ಕಿ- ಸವಾರ ಸಾವು

