Wednesday, October 21, 2026

ಅ. 25ರಂದು ಕೆಮ್ಮಣ್ಣುವಿನಲ್ಲಿ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ

Must read

ಉಡುಪಿ: ಕೆಮ್ಮಣ್ಣು ಸಂತ ತೆರೆಸಾ ಚರ್ಚಿನ ಆಡಳಿತಕ್ಕೆ ಒಳಪಟ್ಟ ನವೀಕೃತ ಲಿಟಲ್ ಫ್ಲವರ್ ಸಭಾಭವನ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಅಕ್ಟೋಬರ್ 25 ರಂದು ಭಾನುವಾರ 9.30 ಕ್ಕೆ ಜರುಗಲಿದೆ.
ಬೆಳಿಗ್ಗೆ ಸಭಾಭವನ ಉದ್ಘಾಟನೆಯೊಂದಿಗೆ ಪವಿತ್ರ ಕೃತಜ್ಞಾತ ಬಲಿಪೂಜೆ ನೆರವೇರಲಿದೆ. ನವೀಕೃತ ಸಭಾಂಗಣವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಆಶೀರ್ವಚನ ನೆರವೇರಿಸಲಿದ್ದಾರೆ.
ಪವಿತ್ರ ಬಲಿಫೂಜೆಯ ಬಳಿಕ ಕಿರು ಸಭಾ ಕಾರ್ಯಕ್ರಮ ನಡೆಯಲಿದ್ದು ಸಭಾಭವನ ದ ನವೀಕರಣಕ್ಕೆ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಗುವುದು.
ನವೀಕೃತ ಸಭಾಭವನ ದಲ್ಲಿ 600 ಮಂದಿಯ ಆಸನ ವ್ಯವಸ್ಥೆ ಇದ್ದು 200 ಮಂದಿಯ ಪ್ರತ್ಯೇಕವಾದ ಆಸನದ ಮಿನಿ ಸಭಾಂಗಣವೂ ಹೊಂದಿದೆ. ಅಲ್ಲದೆ 300 ಮಂದಿ ಕುಳಿತುಕೊಳ್ಳಬಹುದಾದ ಡೈನಿಂಗ್ ಹಾಲ್ ಕೂಡ ಹೊಂದಿದೆ ಎಂದು ಚರ್ಚಿನ ಧರ್ಮಗುರುಗಳಾದ ವಂ|ಫಿಲಿಪ್ ನೆರಿ ಆರಾನ್ಹಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಭಾಭವನದ ಎದುರು ವಿಸ್ತಾರವಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ

spot_img

More articles

LEAVE A REPLY

Please enter your comment!
Please enter your name here