Wednesday, October 21, 2026

91ವರ್ಷಗಳ ಪರಂಪರೆಗೆ ನವೀನ ಸ್ಪರ್ಶ; ಅ.21ರಂದು ಆಭರಣ ಜುವೆಲ್ಲರ್ಸ್ ನ ನವೀಕೃತ ಶೋರೂಂ ಲೋಕಾರ್ಪಣೆ

Must read

ಉಡುಪಿ: ನಗರದ ಸಿಬಿ ರಸ್ತೆಯಲ್ಲಿ 1935ರಲ್ಲಿ ಆರಂಭಗೊಂಡ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ‘ದಿ ಒರಿಜಿನಲ್ ಆಭರಣ ಜುವೆಲ್ಲರ್ಸ್‌’ನ ಮೂಲ ಶೋರೂಂ ಅನ್ನು ಅತ್ಯಾಧುನಿಕ ಶೈಲಿಯಲ್ಲಿ ನವೀಕರಿಸಲಾಗಿದ್ದು, ಅ.21ರಂದು ಪುನಾರಂಭಗೊಳ್ಳಲಿದೆ.
ಆಭರಣ ಜುವೆಲ್ಲರ್ಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೊದಲ ಮಳಿಗೆಯಾಗಿರುವ ಈ ಕಟ್ಟಡವು ಒಂಭತ್ತೊಂದು ದಶಕಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಸಂಸ್ಥೆಯ ಪರಂಪರೆ ಹಾಗೂ ಗುರುತಿನ ಸಂಕೇತವಾಗಿರುವ ಈ ಮಳಿಗೆಯು ಪ್ರಸ್ತುತ ಪ್ರಧಾನ ಕಚೇರಿಯಾಗಿಯೂ ಕಾರ್ಯನಿರ್ವಹಿಸುತ್ತಿದೆ.
ಉಡುಪಿಯಲ್ಲಿ ಒಂದೇ ಮಳಿಗೆಯೊಂದಿಗೆ ಆರಂಭವಾದ ಸಂಸ್ಥೆಯ ಪಯಣ ಇಂದು ಕರ್ನಾಟಕ ಹಾಗೂ ಗೋವಾದ 17 ಸ್ಥಳಗಳಲ್ಲಿ ಒಟ್ಟು 20 ಮಳಿಗೆಗಳನ್ನು ಹೊಂದುವ ಮಟ್ಟಕ್ಕೆ ಬೆಳೆದಿದೆ. ಉಡುಪಿ, ಮಂಗಳೂರು, ಬೆಂಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಗೋವಾದ ಪಣಜಿ ಮತ್ತು ಮಡಗಾಂವ್ ಸೇರಿದಂತೆ ವಿವಿಧ ನಗರಗಳಲ್ಲಿ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸಿದೆ. ಬೆಂಗಳೂರಿನ ಜಯನಗರದ ಐದನೇ ಬ್ಲಾಕ್‌ನಲ್ಲಿಯೂ ಸಂಸ್ಥೆಯ ಅಧಿಕೃತ ಮಳಿಗೆ ಇದೆ.
ಸಂಸ್ಥೆಯ ಅಧ್ಯಕ್ಷ ಮಧುಕರ್ ಕಾಮತ್ ಅವರ ದೂರದೃಷ್ಟಿ ಹಾಗೂ ಗ್ರಾಹಕರ ವಿಶ್ವಾಸವೇ ಬೆಳವಣಿಗೆಗೆ ಪ್ರಮುಖ ಆಧಾರವಾಗಿದೆ. ದಶಕಗಳ ಪರಂಪರೆಯನ್ನು ಉಳಿಸಿಕೊಂಡು, ಆಧುನಿಕ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ಸಂಸ್ಥೆ ತನ್ನ ಸೇವೆಗಳನ್ನು ವಿಸ್ತರಿಸುತ್ತಿದೆ.
ಪರಂಪರೆ ಮತ್ತು ಬೆಳವಣಿಗೆಯ ಕೊಂಡಿ
ಸಿಬಿ ರಸ್ತೆಯ ಮೂಲ ಮಳಿಗೆಯನ್ನು ನವೀಕರಿಸಿರುವ ಕುರಿತು ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಭಾಸ್ ಎಂ. ಕಾಮತ್, “ಸಿಬಿ ರಸ್ತೆಯ ಮಳಿಗೆಯೇ ನಮ್ಮ ಸಂಸ್ಥೆಯ ಬೆಳವಣಿಗೆಯ ಪಯಣಕ್ಕೆ ನಾಂದಿ ಹಾಡಿದ ಸ್ಥಳ. ಈ ಮಳಿಗೆ ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆಯೇ ನಮ್ಮ ಪ್ರತಿಯೊಂದು ಮಳಿಗೆಯೂ ವಿಸ್ತರಿಸಿದೆ. ಗ್ರಾಹಕರಿಗೆ ನವೀಕೃತ ವಾತಾವರಣದಲ್ಲಿ ಇನ್ನಷ್ಟು ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಮಳಿಗೆಯನ್ನು ಆಕರ್ಷಕವಾಗಿ ನವೀಕರಿಸಲಾಗಿದೆ” ಎಂದರು.
ಸಂಸ್ಥೆಯ ನಿರ್ದೇಶಕ ಮಹೇಶ್ ಎಂ. ಕಾಮತ್ ಮಾತನಾಡಿ, “ನಮ್ಮ ಮೂಲ ಮೌಲ್ಯಗಳು ಹಾಗೂ ವೈಶಿಷ್ಟ್ಯವನ್ನು ಉಳಿಸಿಕೊಂಡು ಗ್ರಾಹಕರಿಗೆ ಸೇವೆ ನೀಡುವುದು ಆದ್ಯತೆಯಾಗಿದೆ. ಮಧುಕರ್ ಕಾಮತ್ ಅವರ ದೂರದೃಷ್ಟಿ ಇಂದಿಗೂ ನಮ್ಮ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡುತ್ತಿದೆ. ನವೀಕೃತ ಸಿಬಿ ರಸ್ತೆ ಮಳಿಗೆಯು ನಮ್ಮ ಪರಂಪರೆ ಮತ್ತು ಭವಿಷ್ಯದ ಬೆಳವಣಿಗೆಯ ಆಶಯಗಳ ನಡುವಿನ ಕೊಂಡಿಯಾಗಿದೆ” ಎಂದು ತಿಳಿಸಿದರು.
ಸುಮಾರು 91 ವರ್ಷಗಳ ಇತಿಹಾಸ ಹೊಂದಿರುವ ಆಭರಣ ಜುವೆಲ್ಲರ್ಸ್‌ ನ್ಯಾಯಯುತ ಬೆಲೆಯ ಭರವಸೆ, ನೈತಿಕ ವ್ಯವಹಾರ, ಅತ್ಯುತ್ತಮ ಕರಕುಶಲತೆ ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಐತಿಹಾಸಿಕ ಮೂಲ ಮಳಿಗೆಯ ನವೀಕರಣದೊಂದಿಗೆ ಸಂಸ್ಥೆಯ ಪರಂಪರೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ

spot_img

More articles

LEAVE A REPLY

Please enter your comment!
Please enter your name here