ಜೈಪುರ: ಸಾಮಾಜಿಕ ಜಾಲತಾಣದಲ್ಲಿ (Social Media) ಮಾದ್ಯಮಗಳಲ್ಲಿ ಸಾಕಷ್ಟು ಯುಪಿಎಸ್ಸಿ ಯಶೋಗಾಥೆಗಳ (UPSC Success Story) ಬಗ್ಗೆ ಓದಿರುತ್ತೇವೆ. ಯುಪಿಎಸ್ ಕ್ಲಿಯರ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಯುಪಿಎಸ್ಸಿ ಪಾಸ್ ಮಾಡಲು ಸಾಕಷ್ಟು ಪರಿಶ್ರಮ ಹಾಗೂ ಅವಿರತವಾದ ಓದಿನ ಅಗತ್ಯವಿರುತ್ತದೆ. ಕುಟುಂಬದ ಬೆಂಬಲ ಮತ್ತು ಆರ್ಥಿಕ ಭದ್ರತೆಅ ಇಲ್ಲದವರು ಈ ಪರೀಕ್ಷೆಯ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಪುಸ್ತಕಗಳು ಮತ್ತು ಸಾಮಗ್ರಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜಸ್ಥಾನದ (Rajasthan) ಬೀದಿಬದಿ ವ್ಯಾಪಾರಿಯೊಬ್ಬರ (Street Vendor) ಮಗಳಾದ ದೀಪೇಶ್ ಕುಮಾರಿ ( IAS Deepesh Kumari) ಇಂತಹ ಹಲವು ಅಡೆತಡೆಗಳನ್ನು ದಾಟಿ ಸಿವಿಲ್ ಪರೀಕ್ಷೆಯಲ್ಲಿ 93ನೇ ಶ್ರೇಯಾಂಕ ಮಾಡಿದ್ದಾರೆ.