Thursday, September 19, 2024

ಕಾಪು: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದ ಖಾಸಗಿ ಬಸ್: ಪ್ರಯಾಣಿಕರು ಅಪಾಯದಿಂದ ಪಾರು

Must read

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಕಂದಕಕ್ಕೆ ಬಿದ್ದ ಘಟನೆ ಕಾಪುವಿನ ಉಳಿಯಾರಗೋಳಿ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಓರ್ವ ಮಹಿಳೆಗೆ ಗಾಯ ಉಂಟಾಗಿದೆ. ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಬಸ್ ನಲ್ಲಿ 6-7 ಮಂದಿ ಪ್ರಯಾಣಿಕರು ಮಾತ್ರ ಇದ್ದುದ್ದರಿಂದ ಮತ್ತು ಬಸ್ ಕೂಡಾ ನಿಧಾನವಾಗಿ ಸಂಚರಿಸುತ್ತಿದ್ದುದರಿಂದ ಹೆಚ್ಚಿನ ಅಪಾಯವುಂಟಾಗಿಲ್ಲ.
ಸ್ಥಳೀಯರು ಬಸ್ ನಲ್ಲಿದ್ದವರಿಗೆ ಹೊರಗೆ ಬರಲು ಸಹಕರಿಸಿದ್ದು ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here