Wednesday, January 15, 2025

ಉಡುಪಿ: ಮಾ.1, 2ಕ್ಕೆ ವಕೀಲರ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್, ಶಟಲ್ ಬ್ಯಾಡ್ಮಿಂಟನ್ ಟೂರ್ನ್ ಮೆಂಟ್

Must read

ಉಡುಪಿ: ಉಡುಪಿ ವಕೀಲರ ಸಂಘ ಮತ್ತು ನ್ಯಾಯಾಲಯದ 125 ನೇ ವರ್ಷದ ಶತಮಾನೋತ್ಸವ ರಜತ ಮಹೋತ್ಸವದ ಮುಂದುವರಿದ ಭಾಗವಾಗಿ ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ವಕೀಲರಿಗಾಗಿ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್, ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಶಟಲ್ ಬ್ಯಾಡ್ಮಿಂಟನ್ (ಪುರುಷ-ಮಹಿಳೆಯರಿಗೆ) ಟೂರ್ನ್ ಮೆಂಟ್ ಅನ್ನು ಮಾರ್ಚ್ 1 ಮತ್ತು 2 ರಂದು ಉಡುಪಿಯ ಎಂಜಿ‌ಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 1 ರ ಸಂಜೆ 4 ಗಂಟೆಗೆ ಸುಪ್ರೀಂಕೋರ್ಟಿನ ನ್ಯಾಯಧೀಶೆ ಬಿ.ವಿ.ನಾಗರತ್ನ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟಿನ ನ್ಯಾಯಾಲಯದ ಮುಖ್ಯ ನ್ಯಾಯಧೀಶ ಎನ್.ವಿ. ಅಂಜಾರಿಯಾ
ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್, ಕರ್ನಾಟಕ ಹೈಕೋರ್ಟಿನ ನ್ಯಾಯಧೀಶ ರಾಜೇಶ್ ರೈ ಕೆ, ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಉಪಸ್ಥಿತರಿರಲಿದ್ದಾರೆ ಎಂದರು.

ಮಾರ್ಚ್ ತಾ. 2 ರ ಸಂಜೆ 7 ಗಂಟೆಗೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಸದಸ್ಯ ಪಿ.ಪಿ. ಹೆಗ್ಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಿಕ ದಂಡಾಧಿಕಾರಿ ಸಂತೋಷ್ ಶ್ರೀವಸ್ಸ, ಹಿರಿಯ ನ್ಯಾಯವಾದಿಗಳಾದ ಎಂ. ಶಾಂತಾರಾಮ ಶೆಟ್ಟಿ, ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ ವಕೀಲರ ಸಂಘದ ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ ಎ.ಆರ್., ಸಾಂಸ್ಕೃತಿಕ ಕಾರ್ಯದರ್ಶಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಕ್ರೀಡಾ ಕಾರ್ಯದರ್ಶಿ ಸುಮಿತ್ ಎಸ್ ಹೆಗ್ಡೆ, ಖಜಾಂಚಿ ಗಂಗಾಧರ ಎಚ್.ಎಮ್., ಜಂಟಿ ಕಾರ್ಯದರ್ಶಿ ರವೀಂದ್ರ ಬೈಲೂರು, ವಿವಿಧ ಉಪಸಮಿತಿಗಳ ಸಂಚಾಲಕರಾದ ದಿವಾಕರ್ ಎಮ್ ಶೆಟ್ಟಿ, ಕೆ.ಆರ್ ರಾಮಚಂದ್ರ ಅಡಿಗ, ಬಿ. ನಾಗರಾಜ್, ಪ್ರವೀಣ್ ಎಮ್ ಪೂಜಾರಿ, ಸತೀಶ್ ಎಂ. ಪೂಜಾರಿ, ಆರೂರ್ ಸುಕೇಶ್ ಶೆಟ್ಟಿ, ಅಸಾದುಲ್ಲಾ ಕಟಪಾಡಿ, ಗಣೇಶ್ ಕುಮಾರ್ ಮಟ್ಟು, ಪಂದ್ಯಾಟದ ಉಸ್ತುವಾರಿಗಳಾದ ಸಚಿನ್ ಕುಮಾರ್ ಶೆಟ್ಟಿ, ಗಂಗಾಧರ ಶೇರಿಗಾರ್, ಯೋಗಿಶ್ ಕುಮಾರ್ ಸಾಲಿಗ್ರಾಮ, ಸ್ಯಾಂಡ್ರಾ ಆ್ಯನ್ಸಿಲ್ಲಾ ಡಿಸೋಜಾ ಉಪಸ್ಥಿತರಿದ್ದರು.

…ಪ್ರಶಸ್ತಿಗಳ ವಿವರ…..

ಕ್ರಿಕೆಟ್ ಪಂದ್ಯಾಟ

ವಿಜೇತ ತಂಡಕ್ಕೆ ರೂ. 1,11,111 ಮತ್ತು ಶಾಶ್ವತ ಫಲಕ

ರನ್ನರ್ ಅಪ್ ತಂಡಕ್ಕೆ ರೂ. 55,555 ಮತ್ತು ಶಾಶ್ವತ ಫಲಕ

ತೃತೀಯ ಸ್ಥಾನಕ್ಕೆ ರೂ. 25,555 ಮತ್ತು ಶಾಶ್ವತ ಫಲಕ

ನಾಲ್ಕನೇ ಸ್ಥಾನಕ್ಕೆ 11,111 ರೂ ಮತ್ತು ಶಾಶ್ವತ ಫಲಕ

ಪುರುಷರ ವಾಲಿಬಾಲ್

ವಿಜೇತ ತಂಡಕ್ಕೆ ರೂ. 66,666/- ಮತ್ತು ಶಾಶ್ವತ ಫಲಕ

ರನ್ನರ್ ಅಪ್ ತಂಡಕ್ಕೆ ರೂ. 33,333/- ಮತ್ತು ಶಾಶ್ವತ ಫಲಕ

ತೃತೀಯ ಸ್ಥಾನಕ್ಕೆ ರೂ. 22,222/- ಮತ್ತು ಶಾಶ್ವತ ಫಲಕ


ಮಹಿಳೆಯರ ತ್ರೋಬಾಲ್

ವಿಜೇತ ತಂಡಕ್ಕೆ ರೂ. 33,333/- ಮತ್ತು ಶಾಶ್ವತ ಫಲಕ,

ರನ್ನರ್ ಅಪ್ ತಂಡಕ್ಕೆ ರೂ. 22,222/- ಮತ್ತು ಶಾಶ್ವತ ಫಲಕ

ತೃತೀಯ ಸ್ಥಾನಕ್ಕೆ ರೂ. 11,111/- ಮತ್ತು ಶಾಶ್ವತ ಫಲಕ


ಪುರುಷ ಮತ್ತು ಮಹಿಳೆಯರ ಶಟಲ್ ಬ್ಯಾಡ್ಮಿಂಟನ್

ವಿಜೇತ ತಂಡಕ್ಕೆ ರೂ. 11,111/- ಮತ್ತು ಶಾಶ್ವತ ಫಲಕ

ರನ್ನರ್ ಅಪ್ ತಂಡಕ್ಕೆ ರೂ. 6,666/- ಮತ್ತು ಶಾಶ್ವತ ಫಲಕ

ಅಲ್ಲದೆ ಪ್ರತೀ ವಿಭಾಗದಲ್ಲಿನ ಉತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.

spot_img

More articles

LEAVE A REPLY

Please enter your comment!
Please enter your name here