Saturday, January 11, 2025

ಎನ್ ಕೌಂಟರ್, ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಶಯವಿದೆ; ಅಣ್ಣಾಮಲೈ

Must read

ಉಡುಪಿ: ಎನ್ ಕೌಂಟರ್ ನಲ್ಲಿ ಆರಂಭಗೊಂಡು ಬಳಿಕ ನಡೆದ ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಅನುಮಾನ ಮೂಡುತ್ತಿದೆ. ಸಿಎಂ ಮುಂದೆ ನಕ್ಸಲರ ಶರಣಾಗತಿ ಮಾಡುವ ಅಗತ್ಯವಿರಲಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.

ಆರು ಮಂದಿ ನಕ್ಸಲರ ಶರಣಾಗತಿ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ‌ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿ, ಎಸ್ಪಿ ಅವರ ಸಮ್ಮುಖದಲ್ಲಿ ಕೆಲವು ಪ್ರಕ್ರಿಯೆಗಳ ಮೂಲಕ ಶರಣಾಗತಿ ನಡೆಸಬೇಕಿತ್ತು. ಮೊದಲು ನಕ್ಸಲರು ಶರಣಾಗತಿಯಾಗಿ, ಬಳಿಕ ಕೋರ್ಟ್ ಗೆ ಹೋಗಬೇಕು. ಅವರ ಮೇಲಿರುವ ಎಫ್ ಐಆರ್ ಗಳನ್ನು ಪರಿಶೀಲನೆ ನಡೆಸಬೇಕು. ಹೀಗೆ ಕೆಲವೊಂದು ಕಾರ್ಯವಿಧಾನಗಳಿವೆ. ಆದರೆ ಅದ್ಯಾವುದನ್ನು ಇಲ್ಲಿ ಪಾಲಿಸಿಲ್ಲ. ಇಲ್ಲಿ ಸರಕಾರ ಬಹಳ ಸುಲಭ ವಿಧಾನದ ಮೂಲಕ ಶರಣಾಗತಿ ನಡೆಸಿದೆ. ನಕ್ಸಲರನ್ನು ಶರಣಾಗತಿ ಮಾಡಿಸಿರುವ ಪ್ರಕ್ರಿಯೆಯ ಬಗ್ಗೆ ಹಲವು ಸಂಶಯಗಳು ಮೂಡುತ್ತಿವೆ ಎಂದರು.

spot_img

More articles

LEAVE A REPLY

Please enter your comment!
Please enter your name here