Friday, January 10, 2025

ಅಂಬಲಪಾಡಿ ಜಂಕ್ಷನ್ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿ; ವಾಹನ ಸಂಚಾರಕ್ಕೆ ಬದಲಿ ಮಾರ್ಗ

Must read

ಉಡುಪಿ: ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮೇಲ್ಸೇತುವೆ ಅಂಡರ್ ಪಾಸ್ ಕಾಮಗಾರಿ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವರೆಗೂ ಎಲ್ಲಾ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಬದಲಿ ಸಂಚಾರಿ ಮಾರ್ಗ ಈ ಕೆಳಕಂಡಂತಿದೆ:

ಸ್ವಾಗತ ಗೋಪುರದಿಂದ-ಅಂಬಲಪಾಡಿ-ಕರಾವಳಿ ಜಂಕ್ಷನ್ ವರೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸುವುದು.

 ಕರಾವಳಿಯಿಂದ ಅಂಬಲವಾಡಿ-ಸ್ವಾಗತ ಗೋಪುರದ ಕಡೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸುವುದು.

ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ-ಕಿದಿಯೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ- ಕಾಂಗ್ರೆಸ್ ಭವನ-ಅಗ್ನಿಶಾಮಕ ದಳದ ಕಡೆಯಿಂದ ಸ್ವಾಗತ ಗೋಪುರದವರೆಗೆ ಬಂದು ನಂತರ ಸರ್ವೀಸ್ ರಸ್ತೆಯಿಂದ ಅಂಬಲಪಾಡಿ ಕಡೆಗೆ ಹೋಗುವುದು.

ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ಕರಾವಳಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ ಕಡೆಯಿಂದ ಪೊಲೀಸ್ ಅಧೀಕ್ಷಕರ ಕಛೇರಿ ರಸ್ತೆಯಿಂದಾಗಿ ಬನ್ನಂಜೆ ಕಡೆಗೆ ಹೋಗುವುದು.

spot_img

More articles

LEAVE A REPLY

Please enter your comment!
Please enter your name here