Friday, January 10, 2025

ಉಡುಪಿ: ಅಲೆವೂರು ಫ್ರೆಂಡ್ಸ್ ಕ್ರಿಕೆಟ್ ತಂಡದ ಪ್ರಾಯೋಜಕ ರಾಜಾ ಅಲೆವೂರು ನಿಧನ

Must read

ಉಡುಪಿ: ಸ್ಥಳೀಯ ಕ್ರಿಕೆಟ್ ವಲಯಗಳಲ್ಲಿ ಗೌರವಾನ್ವಿತ ವ್ಯಕ್ತಿ ಮತ್ತು ಪ್ರಾದೇಶಿಕ ತಂಡಗಳ ಪ್ರಾಯೋಜಕರಾದ ರಾಜಾ ಕೊಡಂಚ ಅಲೆವೂರು ಅವರು ಡಿಸೆಂಬರ್ 16 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 47 ವರ್ಷ ವಯಸ್ಸಾಗಿತ್ತು.

ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್‌ ತಂಡಗಳಿಗೆ ಪ್ರಾಯೋಜಕರಾಗಿ ಬೆಂಬಲವಾಗಿ ನಿಂತಿದ್ದರು. ಹಲವಾರು ಸ್ಥಳೀಯ ತಂಡಗಳ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ‌ ಯುವಕ ಆಟಗಾರರಿಗೆ ಟೂರ್ನ್ ಮೆಂಟ್ ಗಳಲ್ಲಿ ಆಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಅಲೆವೂರು ಫ್ರೆಂಡ್ಸ್, ಬೀಡಿನಗುಡ್ಡೆ ಫ್ರೆಂಡ್ಸ್, ಆಕಾಶ್ ಅಲೆವೂರು ಮತ್ತು SFC ಮೈತ್ರಿ ಕ್ರಿಕೆಟರ್ಸ್ ತಂಡಗಳ ಪ್ರಾಯೋಜಕರಾಗಿದ್ದರು. ರಾಜಾ ಅವರ ಹಠಾತ್ ನಿಧನ ಕ್ರಿಕೆಟ್ ವಲಯಕ್ಕೆ ದಿಗ್ಭ್ರಮೆ ಉಂಟು ಮಾಡಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

spot_img

More articles

LEAVE A REPLY

Please enter your comment!
Please enter your name here