Thursday, November 14, 2024

ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ನ ಮಲ್ಪೆ ಶಾಖೆಯಲ್ಲಿ ನಡೆದ 28.26 ಕೋಟಿ ಮೊತ್ತ ಅಕ್ರಮದ ಕುರಿತು ಸೂಕ್ತ ತನಿಖೆ ನಡೆಸಿ; ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಒತ್ತಾಯ

Must read

ಉಡುಪಿ: ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಮಲ್ಪೆ ಶಾಖೆಯಲ್ಲಿ ರೂ. 20 ಸಾವಿರ ಸಾಲ ಪಡೆದ ಗ್ರಾಹಕರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ತಲಾ ರೂ. 2 ಲಕ್ಷದಂತೆ ರೂ. 28.26 ಕೋಟಿ ಮೊತ್ತ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸುವಂತೆ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಾಲದಿಂದಾಗಿ ನಮಗೆ ಇತರ ಶೈಕ್ಷಣಿಕ ಸಾಲ, ಗೃಹ ಸಾಲ ಅಥವಾ ವ್ಯವಹಾರದ ಸಾಲಕ್ಕೆ ಬೇರೆ ಬ್ಯಾಂಕ್‌ಗಳಿಗೆ ಹೋದಾಗ ಮಹಾಲಕ್ಷ್ಮಿ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಇದರ ಮಲ್ಪೆ ಶಾಖೆಯಲ್ಲಿ ದಾಖಲಾಗಿರುವ ರೂ. 2.00 ಲಕ್ಷ ಸಾಲದಿಂದಾಗ ಸಾಲ ಪಡೆಯಲು ಸಿಬಿಲ್‌ ಸಮಸ್ಯೆಯಾಗುತ್ತಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಮಹಾಲಕ್ಷ್ಮಿ ಕೋ. ಆಪರೇಟಿವ್‌ ಬ್ಯಾಂಕ್‌ ಲಿ. ಇದರ ಮಲ್ಪೆ ಶಾಖೆಯಲ್ಲಿ ಪ್ರಸ್ತುತ ರೂ. 20 ಸಾವಿರ ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್‌ನವರು ರೂ. 2.00 ಲಕ್ಷ ಸಾಲ ಪಾವತಿಸಲು ಮನೆಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಗ್ರಾಹಕರು ತಮಗೆ ನ್ಯಾಯಕೊಡಿಸುವಂತೆ ಹಾಗೂ ಈ ಬಗ್ಗೆ ಸಂಬಂದಪಟ್ಟವರಿಂದ ಸೂಕ್ತ ತನಿಖೆ ನಡೆಸಿ ನಾವು ಪಡೆಯದ ಸಾಲದಿಂದ ನಮ್ಮನ್ನು ಮುಕ್ತರನ್ನಾಗಿಸುವಂತೆ ಮನವಿ ಮಾಡಿದ್ದಾರೆ.

ಆದ್ದರಿಂದ ಸುಮಾರು 1413 ಮಂದಿಗೆ ತಲಾ ರೂ. 20 ಸಾವಿರದಂತೆ ಸಾಲ ನೀಡಿ ಬಳಿಕ ನಕಲಿ ದಾಖಲೆ ಸೃಷ್ಟಿಸಿ ಅದನ್ನು ರೂ. 2.00 ಲಕ್ಷ ಎಂದು ಒಟ್ಟು ರೂ. 28.26 ಕೋಟಿ ಬೇನಾಮಿ ಸಾಲದ ಅಕ್ರಮ ಎಸಗಿರುವುದು ಅತಿದೊಡ್ಡ ಹಗರಣವಾಗಿದೆ. ಈ ವಿಷಯದಲ್ಲಿ ಸರ್ಕಾರ ತಕ್ಷಣ ಮದ್ಯ ಪ್ರವೇಶಿಸಿ ಈ ಅಕ್ರಮದ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ನಡೆಸಿ ರೂ. 20 ಸಾವಿರ ಸಾಲ ನೀಡಿರುವುದನ್ನು ರೂ. 2.00 ಲಕ್ಷ ಎಂದು ನಮೂದಾಗಿರುವ ವ್ಯಾತ್ಯಾಸದ ಮೊತ್ತ ಯಾರಿಗೆ ಸೇರಿದೆ ಎಂಬೂದನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಆ ಮೊತ್ತವನ್ನು ವಸೂಲು ಮಾಡಿ ಬ್ಯಾಂಕ್‌ನಿಂದ ಅನ್ಯಾಯಕ್ಕೆ ಒಳಗಾದ ಸಂತ್ರಸ್ತ ಗ್ರಾಹಕರನ್ನು ಸಾಲ ಮುಕ್ತರನ್ನಾಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here