ಉಡುಪಿ: ಕನ್ನರ್ಪಾಡಿ–ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66ರ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಹತ್ತು ದಿನಗಳಿಂದ ನಡೆಯುತ್ತಿರುವ 21ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಮಾರೋಪದ ಅಂಗವಾಗಿ ಬುಧವಾರ (ಸೆ.23) ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಸಂಜೆ 5ಕ್ಕೆ ರಂಗಪೂಜೆ ನಡೆಯಲಿದ್ದು, 5.30ಕ್ಕೆ ಧೂಮ್ರವರ್ಣ ಗಣಪತಿಯ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. 40ಕ್ಕೂ ಅಧಿಕ ಟ್ಯಾಬ್ಲೊಗಳು, ಬ್ಯಾಂಡ್ ಹಾಗೂ ವಿವಿಧ ವಾದ್ಯಗಳೊಂದಿಗೆ ನಡೆಯುವ ಮೆರವಣಿಗೆ ಫಯರ್‌ಸ್ಟೇಷನ್ ರಸ್ತೆ, ಬ್ರಹ್ಮಗಿರಿ ವೃತ್ತ, ಜೋಡುಕಟ್ಟೆ–ಕಿನ್ನಿಮುಲ್ಕಿ ಮುಖ್ಯರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರ ಮಾರ್ಗವಾಗಿ ಕನ್ನರ್ಪಾಡಿ ದೇವಳದ ಕಣ್ವ ಪುಷ್ಕರಣಿ ತಲುಪಲಿದೆ. ಅಲ್ಲಿ ಗಣಪತಿ ಮೂರ್ತಿಯ ಜಲಸ್ತಂಭನ ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಆರತಿ ಮಾಡಲು ಇಚ್ಛಿಸುವವರು ಸಮಿತಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ಸಮಿತಿ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದ್ದಾರೆ.
ಕಿನ್ನಿಮುಲ್ಕಿಯಲ್ಲಿ ಇಂದು ವೈಭವದ ಗಣೇಶ ವಿಸರ್ಜನಾ ಮೆರವಣಿಗೆ

