ಉಡುಪಿ: ಉಡುಪಿ ನಗರಸಭೆ, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮ ನಿಯಮಿತ (KUIDFC) ಹಾಗೂ ಕ್ವಿಮಿಪ್ ಟ್ರಾಂಚ್-2 ಉಡುಪಿ ನಗರದಲ್ಲಿ ಕೈಗೊಳ್ಳುವ ದಿನದ 24 ಗಂಟೆ ಕುಡಿಯುವ ನೀರು ಸರಬರಾಜು ಯೋಜನೆಯ ಹಾಗೂ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ADB ನೆರವಿನ ಕ್ವಿಮಿಪ್ ಟ್ರಾಂಚ್-2 ಯೋಜನೆಯ ಬಗ್ಗೆ ಈಶ್ವರನಗರ ವಾರ್ಡ್ ಮಟ್ಟದ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಮಣಿಪಾಲದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಕಾಲೇಜ್ ನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉಡುಪಿ ನಗರಸಭೆಯ ಪೌರಾಯುಕ್ತ ರಾಯಪ್ಪ ಉದ್ಘಾಟಿಸಿದರು. ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್ ಅಧ್ಯಕ್ಷತೆ ವಹಿಸಿದ್ದರು.
ಯೋಜನೆಯ ಕಿರಿಯ ಅಭಿಯಂತರ ರಾಜಶೇಖರ್, ಸಮುದಾಯ ಅಭಿವೃದ್ಧಿ ಸಹಾಯಕ ಮಾಲತೇಶ್ ಎಂ ಎಚ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕಾಂತರಾಜು ಎ ಎನ್, ಸ್ನೇಹ ಸಂಗಮ ಈಶ್ವರ ನಗರ ಮಣಿಪಾಲ ಇದರ ಅಧ್ಯಕ್ಷ ಹರೀಶ್ ಜಿ ಕಲ್ಮಾಡಿ, ಈಶ್ವರ ನಗರ ರೆಸಿಡೆನ್ಶಿಯಲ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾಜವರ್ಮ ಅರಿಗ, ವಾರ್ಡ್ ಸಮಿತಿ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು. ರಕ್ತದ ಆಪದ್ಬಾಂಧವ ಸತೀಶ್ ಸಾಲಿಯಾನ್ ಕಾರ್ಯಕ್ರಮ