ಉಡುಪಿ: ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರದಲ್ಲಿ (ಎಂಎಸ್‌ಡಿಸಿ) ಡಿ.15ರಂದು ಓರೆನ್ ಇಂಟರ್‌ನ್ಯಾಶನಲ್ ಸ್ಕೂಲ್ ಆಫ್ ಬ್ಯೂಟಿ ಆ್ಯಂಡ್ ವೆಲ್‌ನೆಸ್ ಶುಭಾರಂಭಗೊಳ್ಳಲಿದೆ..
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಎಸ್‌ಡಿಸಿ ರಿಜಿಸ್ಟ್ರಾರ್ ಡಾ. ರಾಧಾಕೃಷ್ಣ ಐತಾಳ ಅವರು, ಅಂದು ಬೆಳಿಗ್ಗೆ 9.30ಕ್ಕೆ ಮಣಿಪಾಲ ಈಶ್ವರನಗರದ ಡಾ ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಘಟಕವನ್ನು ಉದ್ಘಾಟಿಸಲಿದ್ದಾರೆ. ಓರೆನ್ ಇಂಟರ್‌ನ್ಯಾಶನಲ್ ಸಂಸ್ಥೆೆಯ ಉಪಾಧ್ಯಕ್ಷ ಅಶ್ವಿನಿ ಕುಮಾರ್, ಎಂಎಸ್ ಡಿಸಿ ಟ್ರಸ್ಟಿ ಟಿ. ಸಚಿನ್ ಪೈ ಮುಖ್ಯ
ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಸಂಸ್ಥೆಯಲ್ಲಿ ಬ್ಯೂಟಿ ಕೇರ್, ಸ್ಕಿನ್‌ಕೇರ್, ಹೇರ್ ಕೇರ್, ಪೆಡಿಕ್ಯೂರ್, ಮೆನಿಕ್ಯೂರ್, ಮದುವೆ ಮೇಕಪ್ ಬಗ್ಗೆೆ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಆರಂಭದಲ್ಲಿ 20 ಮಂದಿಗೆ 1 ವಾರದ ಸರ್ಟಿಫಿಕೇಟ್ ಕೋರ್ಸ್ ನಡೆಯಲಿದ್ದು, ಹಂತ ಹಂತವಾಗಿ ಅವಧಿಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಬ್ಯೂಟಿಪಾರ್ಲರ್‌ಗಳಲ್ಲಿ ಕೆಲಸ ಮಾಡುವವರಿಗೆ ಕೌಶಲ ತರಬೇತಿ ನೀಡಿ ಪ್ರಮಾಣ ಪತ್ರ ಒದಗಿಸುವುದು
ಸಂಸ್ಥೆೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಎಂಎಸ್‌ಡಿಸಿಯಲ್ಲಿ ಸ್ಕೂಲ್ ಆಫ್ ರೊಬೋಟಿಕ್ ಸ್ಕಿಲ್ಸ್, 3ಡಿ ಪ್ರಿಂಟಿಂಗ್, ಸಿಎನ್‌ಸಿ, ವುಡ್ ವರ್ಕಿಂಗ್, ಡ್ರೋನ್ ತಂತ್ರಜ್ಞಾನ, ಪವರ್
ಹಾಗೂ ಎನರ್ಜಿ ಸಿಸ್ಟಂ, ಇಂಡಸ್ಟ್ರಿಯಲ್ ಆಟೋಮೇಷನ್, ಐಓಟಿ,
ಪಿಸಿಬಿ ವಿನ್ಯಾಸ ಮತ್ತು ಪ್ರೊಟೋ ಟೈಪಿಂಗ್, ರೆಫ್ರಿಜರೇಷನ್ ಮತ್ತು
ಏರ್‌ಕಂಡಿಷನಿಂಗ್, ಆ್ಯನಿಮೇಷನ್ ಟೆಕ್ನಾಲಜಿ ಹಾಗೂ ಐಟಿ ಸ್ಕಿಲ್‌ಗಳ ತರಬೇತಿಯನ್ನು ನೀಡಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಎಂಎಸ್ ಡಿಸಿ ಮುಖ್ಯಸ್ಥ ಸುರ್ಜಿತ್ ಸಿಂಗ್ ಪಾಬ್ಲ ಇದ್ದರು.